ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

bkt-17-3 a
ಬಾಗಲಕೋಟೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೭೧ ನೇ ಸಹಕಾರಿ ಸಪ್ತಾಹ ಸಮಾರಂಭ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
Published on

ಬಾಗಲಕೋಟೆ: ಬಹಳಷ್ಟು ಮಹತ್ವಕಾಂಕ್ಷಿ ಹೊಂದಿರುವ ಸಹಕಾರಿ ಕ್ಷೇತ್ರವನ್ನು ರಾಜ್ಯದಿಂದ ಕೇಂದ್ರದ ವ್ಯಾಪ್ತಿಗೆ ತೆಗೆದುಕೊಳ್ಳಲಾಗುತ್ತಿದೆ. ಸಂವಿಧಾನದಲ್ಲಿ ಸಹಕಾರಿ ಅಽಕಾರ ಆಯಾ ರಾಜ್ಯಗಳಿಗೆ ನೀಡಲಾಗಿದೆ. ನಬಾರ್ಡ್ ಮೂಲಕ ರೈತರಿಗೆ ನೀಡುವ ಸಾಲ ಪ್ರಮಾಣ ಪ್ರಸಕ್ತ ವರ್ಷ ಶೇ.೫೮ ರಷ್ಟು ಕಡಿತಗೊಳಿಸಿ ಅನ್ನದಾತರಿಗೆ ಮೋಸ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯ ಪಕ್ಕದ ಬೃಹತ್ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕರ್ನಾಟಕ ರಾಜ್ಯ ಅಪೇಕ್ಸ್ ಬ್ಯಾಂಕ್, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೭೧ ನೇ ಸಹಕಾರಿ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಸಹಕಾರಿ ಇಲಾಖೆ ಇರಲಿಲ್ಲ. ಸಂವಿಧಾನದಲ್ಲಿ ರಾಜ್ಯಕ್ಕೆ ಅಽಕಾರ ನೀಡಲಾಗಿದೆ. ೭೦ ವರ್ಷಗಳ ಕಾಲ ಸಹಕಾರಿ ಕ್ಷೇತ್ರವು ಸಾಮಾಜಿಕ ಸಮಾನತೆ, ಆರ್ಥಿಕ ಬಲವರ್ಧನೆಗೆ ಶ್ರಮಿಸುತ್ತಿದೆ. ಆದರೇ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಕೇಂದ್ರದಲ್ಲಿ ಇದಕ್ಕಾಗಿ ಪ್ರತ್ಯೇಕ ಇಲಾಖೆ ಸೃಜನೆ ಮಾಡಿದ್ದಾರೆ. ಆದರೇ ಎಳ್ಳಷ್ಟು ಉಪಯೋಗವಾಗಿಲ್ಲ. ಕಳೆದ ವರ್ಷದ ನಬಾರ್ಡ್ಗೆ ೫೪೦೦ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ವರ್ಷ ಕೇವಲ ೨೩೪೦ ಕೋಟಿ ರೂ. ಮಾತ್ರ ನೀಡಲಾಗಿದೆ. ಶೇ.೫೮ ರಷ್ಟು ಅನುದಾನ ಕಡಿತಗೊಳಿಸಲಾಗಿದೆ. ಇದರಿಂದ ಶೇ.೪ ಬಡ್ಡಿದರದಲ್ಲಿ ನಬಾರ್ಡ್ ಮೂಲಕ ರೈತರಿಗೆ ನೀಡಲಾಗುತ್ತಿದ್ದ ಅನುದಾನ ತೀವ್ರ ಪ್ರಮಾಣದಲ್ಲಿ ಕುಸಿತಕಂಡಿದೆ. ಇದು ರೈತರಿಗೆ ಮಾಡುತ್ತಿರುವ ಮೋಸ. ಇದನ್ನು ಸಹಕಾರಿ ಕ್ಷೇತ್ರದವರು ಪ್ರಶ್ನಿಸಬೇಕು ಎಂದರು.

೨೦೧೩-೧೮ ವರೆಗೆ ನಮ್ಮ ಸರ್ಕಾರ ಅವಽಯಲ್ಲಿ ಉತ್ಪಾದನೆ ಆಗುತ್ತಿದ್ದ ಹೆಚ್ಚುವರಿ ಹಾಲು ಖರೀದಿಸಿ ಶಾಲಾ ಮಕ್ಕಳಿಗೆ ನೀಡಲಾಯಿತು. ಪ್ರೋತ್ಸಾಹ ಧನ ೫ ರೂ. ಹೆಚ್ಚಿಸಲಾಯಿತು. ಅಲ್ಲದೆ ೫೦ ಸಾವಿರ ರೂ.ವರೆಗೆ ೮೧೬೫ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ನಂತರ ಬಂದವರು ಸಾಲ ಮಾಡಿದರು ಹೊರತು ಸಾಲ ತೀರಿಸಲಿಲ್ಲ. ನಾನು ಬಂದು ತೀರಸಬೇಕಾಯಿತು. ಅಂದಿನಿಂದ ಇಂದಿಗೂ ಬಾಕಿ ಉಳಿದಿರುವ ೧೩೨ ಕೋಟಿ ರೂ. ಸಾಲ ಮನ್ನಾ ಹಣ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಹಕಾರಿ ಮಂಡಳ ಅಧ್ಯಕ್ಷ ಜೆ.ಟಿ.ದೇವೇಗೌಡ, ಸಚಿವರಾದ ಕೆ.ಎನ್.ರಾಜಣ್ಣ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಶಾಸಕರಾದ ಜೆ.ಟಿ.ಪಾಟೀಲ, ಅಪ್ಪಾಜಿ ನಾಡಗೌಡ, ವಿಜಯಾನಂದ ಕಾಶಪ್ಪನವರ, ಬಿ.ಬಿ.ಚಿಮ್ಮನಕಟ್ಟಿ, ಸಿದ್ದು ಸವದಿ, ಪ್ರಕಾಶ ಹುಕ್ಕೇರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ನಿರ್ದೇಶಕರಾದ ಪ್ರಕಾಶ ತಪಶೆಟ್ಟಿ, ರಾಮಣ್ಣ ತಳೇವಾಡ, ಆನಂದ ನ್ಯಾಮಗೌಡ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net