

ಬಾಗಲಕೋಟೆ: ಮುಡಾ, ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತ್ರವಲ್ಲ, ಅವರ ಮಂತ್ರಿ ಮಂಡಲದ ಕೆಲವರು ಹಾಗೂ ಅವರೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ(ಬಿಜೆಪಿ) ಮುಖಂಡರಿಗೂ ಇದು ತಪ್ಪಿದ್ದಲ್ಲ ಎಂದಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಆಗಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬ್ಯಾಂಕಿನವರು ಸಿಬಿಐಗೆ ತಿಳಿಸಿದ್ದಾರೆ. ಆರ್ಥಿಕ ಇಲಾಖೆ ಸಚಿವರಾಗಿರುವ ಅವರ(ಸಿಎಂ ಸಿದ್ದು) ಪಾತ್ರ ಇದೆ ಎನ್ನುವ ಸುದ್ದಿ ಇದೆ. ಅಷ್ಟರೊಳಗಾಗಿ ಸಿದ್ದರಾಮಯ್ಯ ಅವರು ತಾವು ಪ್ರಾಮಾಣಿಕರು ಎನ್ನುವುದಾಗಿದ್ದರೆ ಮುಡಾ ಮತ್ತು ವಾಲ್ಮೀಕಿ ನಿಗಮದ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು. ಅವರು ಕೊಡಲಿಲ್ಲ ಎಂದರೂ ಸಿಬಿಐ ನವರು ಬಂದೇ ಬರುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದಲ್ಲಿ ನಡೆದಿವೆ ಎನ್ನಲಾದ ಹಗರಣ ಪಟ್ಟಿ ಮಾಡಿದ್ದಾರೆ. ಇತ್ತ ಬಿಜೆಪಿಯವರು ಸದ್ಯ ಸಿದ್ದರಾಮಯ್ಯ ಅವಽಯಲ್ಲಿ ನಡೆದಿರುವ ಹಗರಣಗಳನ್ನು ಹೇಳುತ್ತಿದ್ದಾರೆ. ಹೀಗಾಗಿ ಸಿಎಂ ಅವರು ಅವರ ಮತ್ತು ತಮ್ಮ ಕಾಲಾವಽಯ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಲಿ ಎಂದು ಸವಾಲ್ ಎಸೆದರು.