ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

7sirsi4
Published on

ಶಿರಸಿ: ತಾಲೂಕಿನ ಬದನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಗುಡುಗು ಸಹಿತ ಮಳೆ ಬಿದ್ದಿದೆ. ಈ ವೇಳೆ ಸಿಡಿಲು ಬಡಿದು ಎರಡು ತೆಂಗಿನ ಮರಗಳು ಹೊತ್ತಿ ಉರಿದಿವೆ.

ರಂಗಾಪುರ ಗ್ರಾಮದ ವೆಂಕಟೇಶ ಬಂಗಾರಪ್ಪ ನೆಗಳೂರು ಎಂಬುವವರಿಗೆ ಸೇರಿದ ಹಿತ್ತಲಿನಲ್ಲಿದ್ದ ತೆಂಗಿನ ಮರಗಳಿಗೆ ಏಕಾಏಕಿ ಸಿಡುಲು ಬಡಿದಿದೆ. ಪರಿಣಾಮ ಮರಗಳ ತುದಿಯಲ್ಲಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಮನೆಯವರ ಆತಂಕಕ್ಕೆ ಕಾರಣವಾಯಿತು. ನಂತರ ಎರಡು ತಾಸು ದಾಸನಕೊಪ್ಪ, ಬದನಗೋಡು, ದನಗನಹಳ್ಳಿ ಸೇರಿ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಇಳೆಗೆ ತಂಪೆರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net