ಸಿಡಿಲು ಬಡಿದು ಮೇಕೆ, ಕುರಿ ಸಾವು

cheeta
Published on

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ರಾಮಸಾಗರ ಗ್ರಾಮದ ಹೊರ ವಲಯದಲ್ಲಿ ಮೇಯುತ್ತಿದ್ದ ಕುರಿ ಮತ್ತು ಮೇಕೆಗಳು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಗ್ರಾಮದ ರೈತರಾದ ವರದರಾಜು, ಲಕ್ಕಣ್ಣ, ಗೋವಿಂದರಾಜು ಮತ್ತು ಜಯಲಕ್ಷ್ಮಮ್ಮ ಅವರುಗಳಿಗೆ ಸೇರಿದ ಸುಮಾರು 3 ಲಕ್ಷಕ್ಕೂ ಹೆಚ್ಚು ಮೌಲ್ಯದ 17 ಕುರಿಗಳು ಸಾವನ್ನಪ್ಪಿವೆ.

ಬುಧವಾರ 4 ಗಂಟೆಯ ವೇಳೆ ಗುಡುಗು ಸಹಿತ ಮಳೆ ಪ್ರಾರಂಭವಾಯಿತು. ಬೆಟ್ಟದ ತಪ್ಪಲಿನಲ್ಲಿ ಮೇಯುತ್ತಿದ್ದ ಕುರಿ ಮತ್ತು ಮೇಕೆಗಳಿಗೆ ಇದ್ದಕ್ಕಿದ್ದಂತೆಯೇ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿವೆ. ಕುರಿ ಕಾಯುತ್ತಿದ್ದ ರೈತರು ದೂರ ಇದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಸಿಡಿಲು ಬಡಿದು ಕುರಿ, ಮೇಕೆಗಳು ಅಸುನೀಗಿರುವ ವಿಚಾರವನ್ನು ರೈತರು ತಿಳಿಸಿದ್ದು ಸಂಜೆಯಾಗಿರುವ ಕಾರಣ ಗುರುವಾರ ಬೆಳಗ್ಗೆ ಪಶು ವೈದ್ಯರು ತಪಾಸಣೆ ನಡೆಸಿ ಸರ್ಕಾರದಿಂದ ಸಿಗುವ ಪರಿಹಾರದ ಹಣ ಬರುವಂತೆ ಮಾಡಲಾಗುವುದೆಂದು ತಾಲ್ಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ್ಣಸಿದ್ದಯ್ಯ ತಿಳಿಸಿದರು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net