ಸಿಎಂ ಸಿದ್ದರಾಮಯ್ಯಗೆ ನವೆಂಬರ್‌ನಲ್ಲಿ ಕುತ್ತು

GLD6- 4
ಅಮರೇಶ್ವರ ಮಠದ ನೀಲಕಂಠ ಸ್ವಾಮಿಗಳು
Published on

ಬಾಗಲಕೋಟೆ: ಲಿಂಗಾಯತ ಧರ್ಮ ಪ್ರತ್ಯೇಕ ಮಾಡಲು ಹೋಗಿ ಜೇನು ಗೂಡಿಗೆ ಕೈ ಹಾಕಿ ೨೦೧೮ ರಲ್ಲಿ ಕೈ ಸುಟ್ಟುಕೊಂಡಿದ್ದರು. ಸಿಎಂ ಸಿದ್ರಾಮಯ್ಯ ಮತ್ತೆ ಜೇನುಗೂಡಿಗೆ ಕೈ ಹಾಕಿದ್ದಾರೆ. ಆ ಜೇನು ಹುಳಗಳಿಂದ ಕಡಿಯುವುದು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದಿದ್ದೇವು. ಅವರು ಅಲ್ಲಿಗೆ ಹೋಗಿದ್ದರಿಂದ ಸರ್ಕಾರದಲ್ಲಿ ಗೊಂದಲ ಉಂಟಾಗಲಿದೆ. ಇದೇ ನೆವೆಂಬರ್‌ನಲ್ಲಿ ಸಿದ್ದರಾಮಯ್ಯನವರ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಕೋಟೆಕಲ್ಲಿನ ಅಮರೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ಗುಳೇದಗುಡ್ಡ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಬಸವ ಸಂಸ್ಕೃತಿ ಸಮಾರೋಪಕ್ಕೆ ಹೋಗಿದ್ದು ಸಂತೋಷ ತಂದಿದೆ. ಬಸವಣ್ಣನವರ ಇತಿಹಾಸ ಪ್ರಚುರಪಡಿಸಲು ಬಸವಣ್ಣನವರನು ್ನಸಾಂಸ್ಕೃತಿಕ ನಾಯಕನಾಗಿ ಆಯ್ಕೆ ಮಾಡಿದ್ದು, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ಹೆಸರಿಡಲು ನಿರ್ಧಾರ ಮಾಡಿದ್ದು ಸ್ವಾಗತಾರ್ಹ. ಆದರೆ ೨೦೧೮ರಲ್ಲಿ ಲಿಂಗಾಯತ ಧರ್ಮ ಪ್ರತ್ಯೇಕ ಮಾಡಲು ಹೋರಾಟ ಹೋಗಿ ದೊಡ್ಡ ಆಘಾತ ಅನುಭವಿಸಿದ್ದರು. ಈಗ ಅದೇ ಮಾದರಿಯಲ್ಲಿ ಹೋಗಿ ಸಂಕಷ್ಟ ಅನುಭವಿಸುವ ಸಾಧ್ಯತೆಗಳಿವೆ ಎಂದರು.

ಕೆಲವು ಸಚಿವರು ವೀರಶೈವ ಲಿಂಗಾಯತದಕಡೆ, ಕೆಲ ಸಚಿವರು ಲಿಂಗಾಯತದ ಕÀಡೆಗೆ ಇರುವದರಿಂದ ಸರ್ಕಾರದಲ್ಲಿ ಗೊಂದಲ ಉಂಟಾಗಿದ್ದು, ಇದು ನವೆಂಬರ್‌ನಲ್ಲಿ ಸಿದ್ದರಾಮಯ್ಯವರ ಸ್ಥಾನಕ್ಕೆ ಹೆಚ್ಚು ಕಡಿಮೆಯಾಗಬಹುದು. ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಇಬ್ಭಾಗ ಮಾಡುವುದು ಬಿಟ್ಟರೆ ಸಿದ್ದರಾಮಯ್ಯಮವರಿಗೆ ಒಳ್ಳೆಯಾದಾಗುತ್ತದೆ ಎಂದು ತಿಳಿಸಿದರು.

ನಾವೆಲ್ಲ ಹಿಂದೂ ಧರ್ಮದ ಆಚರಣೆ ಮಾಡುತ್ತಿರುವದರಿಂದ ನಾವು ಹಿಂದೂಗಳೇ, ಸÀರ್ಕಾರದಲ್ಲಿನ ಕೆಲವು ಸಚಿವರು ಆಕಡೆ, ಈ ಕಡೆ ಇದ್ದಾರೆ. ಸಚಿವ ಸ್ಥಾನ ಉಳಿಬೇಕಾದರೆ, ನೀವೆಲ್ಲ ಒಂದು ಕಡೆ ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನೀವೆಲ್ಲ ಒಂದಾಗಬೇಕು, ಮುಖ್ಯವಾಗಿ ಸಿದ್ದರಾಮಯ್ಯನವರು ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಎರಡೂ ಒಂದಾಗಿಸುವ ಕೆಲಸ ಮಾಡಿದರೆ ನಿಮ್ಮ ಸ್ಥಾನ ಶಾಶ್ವತವಾಗಿ ಉಳಿಯುತ್ತದೆ. ಇಲ್ಲವಾದರ ನವೆಂಬರನಲ್ಲಿ ನಿಮಗೆ ಕುತ್ತು ಬರಬಹುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net