ಸಿಎಂ ಸಿದ್ದರಾಮಯ್ಯ ಅಭಿನಂದನಾ ಸಮಾರಂಭ 3ರಂದು

Siddaramaiah
Published on

ಕಲಬುರಗಿ: ಬೆಳಗಾವಿಯಲ್ಲಿ ಅಕ್ಟೋಬರ್ ೩ರಂದು ಸೇಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ೯ನೇ ರಾಷ್ಟಿçÃಯ ಮಹಾ ಸಮಾವೇಶ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಗೊಂಡಕುರುಬ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಕೌಲಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳಿಂದ ಕುರುಬ ಸಮಾಜದ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಸಮಾಜದ ಪ್ರಮುಖರೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಚಕ್ರವರ್ತಿ ಚಂದ್ರಗುಪ್ತ ಮೌರ್ಯ, ರಾಜಮಾತಾ ಅಹಲ್ಯಾದೇವಿ ಹೋಳಕರ್, ದಾಸ ಶ್ರೇಷ್ಠ ಕನಕದಾಸರು, ಮಹಾಕವಿ ಕಾಳಿದಾಸ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ವಿಜಯನಗರದ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ-ಬುಕ್ಕರೂ ಕುರುಬ ಸಮಾಜದವರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಹರಿಯಾಣ ರಾಜ್ಯಪಾಲರು, ರಾಷ್ಟ್ರೀಯ ಮುಖಂಡರು, ಗಣ್ಯರು, ಸಮಾಜದ ಮಠಾಧೀಶರು ಪಾಲ್ಗೊಳ್ಳುವರು ಎಂದರು.

ಮುಖಂಡರಾದ ಬೈಲಪ್ಪ ನೆಲೋಗಿ, ರೇವಣಸಿದ್ದ ಸಾತನೂರ್, ಮಲ್ಲಿಕಾರ್ಜುನ ಪೂಜಾರಿ, ನಿಂಗಪ್ಪ ಹೆರೂರ್, ಎಸ್.ಎಸ್.ಕಮಠಾಣ, ಸಿದ್ಧಪ್ಪ ಪೂಜಾರಿ, ಶರಣಪ್ಪ ಕೆಸರಟಗಿ, ಶರಣಪ್ಪ ಭಂಕೂರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net