ಸಿಎಂ ಬೊಮ್ಮಾಯಿ ಸರ್ಕಾರದಿಂದ ಐತಿಹಾಸಿಕ ನಿರ್ಧಾರ

bkt-26-2 (2)
ಸಚಿವ ಗೋವಿಂದ ಕಾರಜೋಳ
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಕೃಷಿ ಭೂಮಿ, ರೈತರ ಮನೆ, ಮಠ ಮುಳುಗಡೆ ಹೆಚ್ಚಿನ ದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಒಣ ಬೇಸಾಯಕ್ಕೆ ೫ ಲಕ್ಷ ರೂ., ನೀರಾವರಿಗೆ ೬ ಲಕ್ಷ ರೂ., ೨೦ ಗ್ರಾಮಗಳ ಸವಕಳಿ ಕಡಿತವಿಲ್ಲದೇ ಶೇ.೨೦ ನೀಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಆದೇಶದಿಂದ ರೈತರಿಗೆ ೧.೩೪ ಲಕ್ಷ ಎಕರೆ ಭೂ ಸ್ವಾಧೀನ ಆಗಿದೆ. ಬಾಕಿ ಉಳಿದಿರುವ ೧.೦೭ ಲಕ್ಷ ಎಕರೆ ಭೂಮಿಗೆ ಹೊಸ ಆದೇಶದಂತೆ ಪರಿಹಾರ ಸಿಗುತ್ತೆ. ೨೦೧೩ ಭೂಸ್ವಾಧೀನ ಕಾಯ್ದೆ ಪ್ರಕಾರ ೫ ಲಕ್ಷ ಭೂಮಿ ಮೌಲ್ಯ ಇದ್ದರೆ ೨೦ ಲಕ್ಷ ಸಿಗುತ್ತೆ, ೬ ಲಕ್ಷ ಇದ್ದರೆ ೨೪ ಲಕ್ಷ ಸಿಗುತ್ತೆ. ನಾಲ್ಕು ಪಟ್ಟು ಹೆಚ್ಚಿಗೆ ಸಿಗುತ್ತೆ. ಇದು ನ್ಯಾಯಯುತ ಅವಾರ್ಡ ಇದು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಾಡದನ್ನು ನಾವು ಮಾಡಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.೩೧ ರೊಳಗೆ ೪೦ ಸಾವಿರ ಎಕರೆ ಭೂಸ್ವಾಧೀನ ಮಾಡಲು ಪ್ರಯತ್ನಿಸುತ್ತೇವೆ. ನಮ್ಮ ಸರ್ಕಾರ ೨೦೧೯ ಜುಲೈನಲ್ಲಿ ಬಂದ ಮೇಲೆ ಯುಕೆಪಿ-೩ನೇ ಹಂತಕ್ಕೆ ೩ ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಮಾರ್ಚ ಅಂತ್ಯಕ್ಕೆ ೫ ಸಾವಿರ ಕೋಟಿ ಖರ್ಚು ಮಾಡುವ ಗುರಿ ಹೊಂದಿದ್ದೇವೆ. ಕಾಂಗ್ರೆಸ್ ೨೦೧೩ ರಲ್ಲಿ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ ಯುಕೆಪಿಗೆ ೫೦ ಸಾವಿರ ಕೋಟಿ ರೂ. ಹಣ ಖರ್ಚು ಮಾಡುವುದಾಗಿ ಆಣೆ ಪ್ರಮಾಣ ಮಾಡಿದ್ದರು. ಆದರೆ ಐದು ವರ್ಷದಲ್ಲಿ ಅವರು ಮಾಡಿದ್ದು ೨೬೫೦ ಕೋಟಿ ರೂ.ಮಾತ್ರ. ನಾವು ೮ ಸಾವಿರ ಕೋಟಿ ಖಂಡಿತವಾಗಿ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net