ಸಿ.ಟಿ.ರವಿಗೆ ಹೆಲಿಕ್ಯಾಪ್ಟರ್ ಮಾಡಬೇಕಿತ್ತಾ?

iRamappaBalappaTimmapur58af
Published on

ಬಾಗಲಕೋಟೆ: ಸದನದಲ್ಲಿ ಮಹಿಳೆಯ ಬಗ್ಗೆ ಪರಿಷತ್ ಸದಸ್ಯ ಸಿ.ಟಿ.ರವಿ ಆ ರೀತಿ ಮಾತನಾಡಬಾರದಿತ್ತು. ಈ ವಿಚಾರವಾಗಿ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ. ಬದಲಿಗೆ ರವಿ ಅವರಿಗೆ ಸನ್ಮಾನ ಮಾಡಿ, ಗೌರಯುತವಾಗಿ ಹೆಲಿಪ್ಯಾಕ್ಟರ್‌ನಲ್ಲಿ ಕರೆದುಕೊಂಡು ಹೋಗಬೇಕಿತ್ತಾ?

ಹೀಗೆಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ. ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ.ರವಿ ಹೆಬ್ಬಾಳ್ಕರ್ ಬಗ್ಗೆ ಆ ಪದ ಬಳಸಿದ್ದು ಸತ್ಯ. ಮತ್ತೆ ಪೊಲೀಸರು ಹೇಗೆ ನಡೆದುಕೊಳ್ಳಬೇಕಿತ್ತು ಎಂದು ಮರು ಪ್ರಶ್ನೆ ಮಾಡಿದರು.

ಸಿ.ಟಿ.ರವಿ ಅವರು ಹಿಂದು ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ. ಹೆಣ್ಣು ಮಕ್ಕಳ ಬಗ್ಗೆ ಅಗೌರವಾಗಿ ನಡೆದುಕೊಳ್ಳುವುದು ಸರಿಯಲ್ಲ. ಇದೀಗ ರವಿ, ತಮ್ಮ ಹೇಳಿಕೆಯನ್ನು ತಿರುಚಿ ಬಚಾವ್ ಆಗಲು ಹೊರಟಿದ್ದಾರೆ. ನಮ್ಮ ನಾಡಿನ ಕಾನೂನು ಗಟ್ಟಿಯಾಗಿದೆ. ಈ ಹಿಂದೆ ಜಾಲಪ್ಪ ಅಂತವರಿಗೆ ಬೇಡಿ ಹಾಕಿಕೊಂಡು ಹೋಗಿದ್ದರು. ಇನ್ನು ಈ ಸಿ.ಟಿ.ರವಿಯನ್ನು ಬಿಡುತ್ತಾರಾ? ರವಿಗೆ ಕಾನೂನಾತ್ಮಕವಾಗಿ ಶಿಕ್ಷೆ ಆಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net