ಸಾಹಿತ್ಯ ಸುಂದರ ಬದುಕುನ್ನು ರೂಪಿಸುತ್ತೆ

bkt-15-9
ನವನಗರದ ಕಲಾಭವನ ಆವರಣದಲ್ಲಿ ಕಸಾಪ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕಥಾಸಂಕಲನ ಕೃತಿ ಅವಲೋಕನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿದರು.
Published on

ಬಾಗಲಕೋಟೆ: ಇಂದಿನ ಆಧುನಿಕ ಒತ್ತಡಗಳಿಂದಾಗಿ ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವ ಪರಿಣಾಮ ಸಮಾಜದಲ್ಲಿ ನೆಮ್ಮದಿ ಕಾಣದಂತಗಾಗಿದೆ. ಸಾಹಿತ್ಯದ ಓದು ಸುಂದರ ಬದುಕನ್ನು ರೂಪಿಸುತ್ತದೆ ಎಂದು ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.

ನವನಗರದ ಕಲಾಭವನ ಆವರಣದಲ್ಲಿ ಕಸಾಪ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕಥಾಸಂಕಲನ ಕೃತಿ ಅವಲೋಕನ ಮತ್ತು ಸಂವಾದದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ವಿಶಾಲವಾಗಿದೆ. ವಿವಿಧ ಪ್ರಕಾರದಲ್ಲಿರುವ ನಮ್ಮ ಸಾಹಿತ್ಯವನ್ನು ಓದಲು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಕನ್ನಡ ಸಾಹಿತ್ಯ ಕೃತಿಗಳನ್ನು ಓದುಗರಿಗೆ ತಲುಪಿಸುವ, ಅವಲೋಕಿಸುವ ಮತ್ತು ಲೇಖಕರ ಸಮ್ಮುಖದಲ್ಲಿ ಮುಖಾಮುಖಿ ಸಂವಾದದ ಕಾರ್ಯ ಮಾಡುತ್ತಿರುವ ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆ ಮೆಚ್ಚಿಗೆ ತಂದಿದೆ ಎಂದರು.

ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕಥಾ ಸಂಕಲನ ನಾಡಿನ ಗ್ರಾಮ ಸಂಸ್ಕೃತಿಯ ಮೂಲಕ ಹಳ್ಳಿಗಾಡಿನ ಜೀವನವನ್ನು ಕಟ್ಟಿಕೊಡುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕನ್ನಡ ಸಾಹಿತ್ಯ ಕೃತಿಗಳನ್ನು ಅವಲೋಕನ ಮತ್ತು ಸಂವಾದ ಮಾಡುವದರಿಂದ ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬೆಳಸಲು ಸಹಕಾರಿಯಾಗುತ್ತದೆ. ಸಾಹಿತ್ಯ ಓದುವದರಿಂದ ಭಾವನೆಗಳು ಶ್ರೀಮಂತವಾಗುತ್ತವೆ ಎಂದು ತಿಳಿಸಿದರು.
ವಿಶ್ರಾಂತ ಪ್ರಾಂಶುಪಾಲರಾದ ಬಿ.ಆರ್.ಬೋಳಿಶೆಟ್ಟಿ, ನಾವು ದಿನನಿತ್ಯ ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಆನಂದಮಯ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೃತಿಕಾರ ಮಲ್ಲಿಕಾರ್ಜುನ ಶೆಲ್ಲಿಕೇರಿ, ಕೇಂದ್ರ ಕಸಾಪ ಸದಸ್ಯ ಜಿ.ಕೆ.ತಳವಾರ, ಸಾ.ಶಿ.ಇಲಾಖೆ ವಿಶ್ರಾಂತಿ ನಿರ್ದೇಶಕ ಸಿದ್ಧರಾಮ ಮನಹಳ್ಳಿ, ಎಸ್.ಎಸ್.ಹಳ್ಳೂರ, ನಿವೃತ್ತ ತಹಸೀಲ್ದಾರ ಮೋಹನ ಬ್ಯಾಹಟ್ಟಿ, ಸಾಹಿತಿ ಡಾ.ಪ್ರಕಾಶ ಖಾಡೆ, ಮಲ್ಲಿಕಾರ್ಜುನ ಯಳವಾರ, ಜಿ.ಬಿ.ದಾನಶೆಟ್ಟಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಉಪಸ್ಥಿತರಿದ್ದರು. ಮಾಹಾಂತೇಶ ಹೊದ್ಲೂರ ಪ್ರಾರ್ಥಿಸಿದರು. ಡಾ.ಚಂದ್ರಶೇಕರ ಕಾಳನ್ನವರ ಸ್ವಾಗತಿಸಿದರು. ಗುರು ಗಾಣಿಗೇರಿ ನಿರೂಪಿಸಿದರು. ಪಾಂಡುರಂಗ ಸಣ್ಣಪ್ಪನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net