ಸಾಹಿತಿ ಪ್ರೇಮಾ ಮಂಜುನಾಥ್‌ಗೆ ಶಿಕ್ಷಣ ರತ್ನ ಪ್ರಶಸ್ತಿ

IMG-20250929-WA0233
Published on

ಹೊಳೆನರಸೀಪುರ: ಚುಟುಕು ಸಾಹಿತಿ ಪ್ರೇಮಾ ಮಂಜುನಾಥ್ ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಶೈಕ್ಷಣಿಕ ದ್ವಿಭಾಷ ಮಾಸ ಪತ್ರಿಕೆ ನೀಡುವ ರಾಜ್ಯ ಮಟ್ಟದ ಶಿಕ್ಷಣ ರತ್ನ -2025 ಪ್ರಶಸ್ತಿ ನೀಡಿ ಗೌರವಿಸಿದೆ.

ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು, ಚುಟುಕು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕೃತಿಯನ್ನು ಪ್ರಕಟಿಸಿರುವ ಇವರು, ಕಿತ್ತೂರು ರಾಣಿ ಚೆನ್ನಮ್ಮ, ಧ್ವನಿ ಕೊಟ್ಟ ಧಣಿ ಯಂತಹ ಹಲವು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.

ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿರುವ ಕೀರ್ತಿ ಇವರದ್ದಾಗಿದೆ. ಉತ್ತಮ ಯೋಗ ಪಟುವಾದ ಇವರು ನೂರಾರು ಕಾರ್ಯಕ್ರಮ ನಡೆಸುವುದರೊಂದಿಗೆ ಹಲವಾರು ಯೋಗ ಶಿಷ್ಯರನ್ನು ತಯಾರು ಮಾಡಿದ್ದಾರೆ.

ಪ್ರೇಮಾ ಮಂಜುನಾಥ್ ಅವರ ಸೇವೆಯನ್ನು ಗುರುತಿಸಿ ಚಲನಚಿತ್ರ ನಿರ್ದೇಶಕ ಹಾಗೂ ನಟ ಎಸ್.ನಾರಾಯಣ, ಖ್ಯಾತ ಪೊಲೀಸ್ ಅಧಿಕಾರಿ ಬಸವರಾಜ್ ಮಾಲಗತ್ತಿ ಇನ್ನಿತರ ಪ್ರಮುಖರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net