

ಬಾಗಲಕೋಟೆ: ಕೂಡಲ ಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೇ ಗಂಗಾದೇವಿ, ಮಾದೇಶ್ವರ ಸ್ವಾಮೀಜಿ, ಬಸವ ಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಮಾತೇ ಮಹಾದೇವಿ ರೂಪಿಸಿದ ಪೀಠದ ಬೈಲಾ ನಿಯಮ ಉಲ್ಲಂöಸಿ ಅಜೀವ ಸದಸ್ಯರಾಗಿರುವ ನಮ್ಮನ್ನು ಪೀಠದ ಟ್ರಸ್ಟನಿಂದ ಹೊರಗೆ ಹಾಕಿದ್ದಾರೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಆರೋಪಿಸಿದರು.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಸಾವಿರಾರು ಕೋಟಿ ಆಸ್ತಿ ಇದೆ. ಇದರ ಮೇಲೆ ಅವರ ಕಣ್ಣು ಬಿದ್ದಿದೆ. ಮಾತೇ ಗಂಗಾದೇವಿ ತಮ್ಮ ಪೂವಾಶ್ರಮದ ಸಹೋದರಿಗೆ ದೆಹಲಿ ಆಸ್ತಿಗೆ ನೇಮಕ ಮಾಡಿದ್ದಾರೆ. ತಮ್ಮ ಮನ ಬದ್ದಂತೆ ವರ್ತಿಸುತ್ತಿದ್ದಾರೆ. ಇದೇ ಕಾರಣಕ್ಕೆ ಬೆಂಗಳೂರಿನ ಕುಂಬಳಗೋಡ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಹುದ್ದೆಯಿಂದ ನನಗೆ ಹೊರಗೆ ಹಾಕಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಷ್ಟ್ರೀಯ ಬಸವ ದಳ ಸಮಿತಿ ಅಧ್ಯಕ್ಷ ಹುದ್ದೆಯಲ್ಲಿ ನಾನೇ ಹುದ್ದೆ ಇದ್ದೇನೆ. ಸಮಿತಿ ಮಾತೇ ಗಂಗಾದೇವಿ ಸದಸ್ಯರಾಗಿಲ್ಲ. ಮಾತೇ ಮಹಾದೇವಿ ಲಿಂಗೈಕ್ಯ ಆದ ನಂತರ ಕೂಡಲಸಂಗದ ಬಸವ ಧರ್ಮ ಪೀಠವು ವ್ಯಾಪಾರಿಕರಣವಾಗುತ್ತಿದೆ. ಧರ್ಮ ಪ್ರಚಾರ, ಹೋರಾಟ, ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಲಿಂಗಾಯತ ಧರ್ಮ, ಸಮುದಾಯದ ಬಗ್ಗೆ ಕಾಳಜಿ ಇಲ್ಲ. ಕಳೆದ ೩೦ ವರ್ಷಗಳಿಂದ ಬಸವ ಧರ್ಮ ಪ್ರಚಾರದಲ್ಲಿ ತೊಡಗಿದ್ದೇನೆ. ಪೀಠ ಆಸ್ತಿ ಲೂಟಿ ಹೊಡೆಯಲು ಮತಾ ಗಂಗಾದೇವಿ ಹಾಗೂ ಅವರ ಬೆಂಬಲಿಗರು ನಿಂತಿದ್ದಾರೆ ಎಂದರು.
ಕೂಡಲಸಂಗಮ ಸೇರಿದಂತೆ ಧರ್ಮ ಪ್ರಚಾರಕ್ಕಾಗಿ ೫ ಪೀಠಗಳನ್ನು ಸ್ಥಾಪನೆ ಮಾಡಲಾಯಿತು. ಅದಕ್ಕೆ ನಾನು ಕೂಡಾ ಓರ್ವ ಕಾರಣಿಕರ್ತ. ಆದರೇ ನನ್ನನ್ನು ಟ್ರಸ್ಟನಿಂದ ಹೊರ ಹಾಕಿದ್ದಾರೆ. ಇದಕ್ಕೆ ದೃತಿಗೆಟ್ಟಿಲ್ಲ. ಟ್ರಸ್ಟ ವಿಷಯ ಕೋರ್ಟಿಗೆ ಮೊರೆ ಹೋಗಿದ್ದೇನೆ. ಈ ಹಿಂದೆ ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಕಲ್ಯಾಣ ಪರ್ವ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿನ ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲಿ ಸಂಧಾನವಾಗಿತ್ತು. ನಂತರ ಕೆಲವೇ ದಿನಗಳಲ್ಲಿ ಮಾತೇ ಗಂಗಾದೇವಿ ಉಲ್ಟಾ ಹೊಡೆದರು. ನಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ. ಲಿಂಗಾಯನಂದ ಸ್ವಾಮಿಜಿ, ಮಾತೇ ಮಹಾದೇವಿ ಗದ್ದುಗೆ ದರ್ಶನಕ್ಕೂ ನಮಗೆ ಬೀಡುತ್ತಿಲ್ಲ. ಶೇ.೮೦ ಭಕ್ತರು ನಮ್ಮ ಪರವಾಗಿ ಇದ್ದಾರೆ ಎಂದು ಹೇಳಿದರು.
ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಕೋಶಾಧ್ಯಕ್ಷ ಸದ್ಗುರು ಪ್ರಭು ಲಿಂಗ ಸ್ವಾಮೀಜಿ, ಮುಖಂಡರಾದ ಅಶೋಕ ಬೆಂಡಿಗೇರಿ, ಕೆ.ಬಸವರಾಜಪ್ಪ, ಸಂಗಮೇಶ ಲಿಂಗಾಯತ, ಚಂದ್ರಕಾಂತ ಲುಕ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.