ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ

death
Published on

ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಗ್ರಾಮದ ರೈತ ಮಹಿಳೆ ಲಗಮವ್ವ ಶಿವಾನಂದ ಬಾಗಿ (30) ಸಾಲಬಾಧೆ ತಾಳಲಾರದೆ ಜು.15ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ವಿವಿಧ ಸಂಘ-ಸಂಸ್ಥೆಗಳಲ್ಲಿ 30 ಸಾವಿರ ರೂ. ಹಾಗೂ ಪತಿಯು ಪಕ್ಕದ ಬೆನಿವಾಡ ಗ್ರಾಮದ ಬಸವೇಶ್ವರ ಸೊಸೈಟಿ ಮತ್ತು ಇತರ ಸಂಘಗಳಲ್ಲಿ 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವ ಚಿಂತೆಯಲ್ಲಿ ಲಗಮವ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಖಾಸಗಿ ಆಸ್ಪತ್ರೆಗೆ ದಾಖಲಿಲಿಸಲಾಗಿತ್ತಾದರೂ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾಳೆ. ಮೃತಳ ತಂದೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net