ಸಾಲಗಾಂವ ಗ್ರಾಮದಲ್ಲಿ ಕಾಡು ಹಂದಿ ಮಾಂಸ ವಶ

10mnd1
Published on

ಮುಂಡಗೋಡ: ಕಾಡು ಹಂದಿ ಮಾಂಸವನ್ನು ಪಾಲು ಮಾಡಲು ಇಟ್ಟಿದ್ದ ತಾಲೂಕಿನ ಸಾಲಗಾಂವ ಗ್ರಾಮದ ವ್ಯಕ್ತಿಯೊಬ್ಬನ ಮನೆ ಮೇಲೆ ಮಂಗಳವಾರ ರಾತ್ರಿ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿಯ ವೇಳೆ ಆರೋಪಿ ಪರಶುರಾಮ ವಡ್ಡರ ಪರಾರಿಯಾಗಿದ್ದಾನೆ. ಈತ ತನ್ನ ಮನೆಯಲ್ಲಿ ಕಾಡು ಹಂದಿಯ ಮಾಂಸವನ್ನು ಪಾಲು ಮಾಡಲು ತಯಾರಿ ನಡೆಸಿದ್ದನು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್​ಎಫ್​ಒ ಸುರೇಶ ಕುಳ್ಳೊಳ್ಳಿ, ಉಪ ವಲಯ ಅರಣ್ಯಾಧಿಕಾರಿ ಗಿರೀಶ ಕೊಳೇಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net