ಸಾಲ ವಸೂಲಾತಿಯಲ್ಲಿ ಸಂಘ ಪ್ರಥಮ ಸ್ಥಾನ

24 yelandur 01
Published on

ಯಳಂದೂರು: ರೈತರಿಂದ 5 ಕೋಟಿ ರೂ. ಸಾಲದ ಬೇಡಿಕೆ ಇದ್ದು ಇದನ್ನು ಕೊಡಿಸಲು ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದು ಯಳಂದೂರು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಪಿ.ನಿರಂಜನಮೂರ್ತಿ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ಈ ಹಿಂದಿನ ಬೋರ್ಡ್‌ನಲ್ಲಿ ನಷ್ಟವಾಗಿತ್ತು. ಇದನ್ನು ಸರಿದೂಗಿಸಿ, ಹೊಸ ಸಾಲವನ್ನು ತರಬೇಕಿದೆ. ಇದಕ್ಕೆ ಸಾಲ ತೆಗೆದುಕೊಂಡಿರುವ ರೈತರು ಸಾಲವನ್ನು ಮರುಪಾವತಿ ಮಾಡಬೇಕು. ಆಗ ಇನ್ನಷ್ಟು ಹಣವನ್ನು ಸಂಘಕ್ಕೆ ತರಬಹುದು ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ. ಸಂಘವು ಜಿಲ್ಲೆಯಲ್ಲೇ ಸಾಲ ವಸೂಲಾತಿಯಲ್ಲಿ ಐದು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿದೆ ಎಂದರು.

ಸಂಘದ ವಾರ್ಷಿಕ ವರದಿಯನ್ನು ಪ್ರಭಾರ ವ್ಯವಸ್ಥಾಪಕ ಜಿ.ಎಸ್.ಮಹದೇವಸ್ವಾಮಿ ಓದಿದರು. ಸಂಘದ ಉಪಾಧ್ಯಕ್ಷ ವೈ.ಎಸ್.ಭೀಮಪ್ಪ, ನಿರ್ದೇಶಕರಾದ ಗೌರಮ್ಮ, ಕೆ.ಲಿಂಗರಾಜು, ಎಚ್.ಪಿ.ಮಲ್ಲಣ್ಣ, ರಾಜಶೇಖರ, ರಾಜಮ್ಮ, ಎಸ್.ರಶ್ಮಿ, ಜಿ.ಸತೀಶ್, ವಿ.ಸೋಮಣ್ಣ, ಕೆ.ಎಂ.ಶಿವಣ್ಣ, ಸಿದ್ದಪ್ಪಸ್ವಾಮಿ, ಪಿ.ವೃಷಭೇಂದ್ರ, ಚಂಗಚಹಳ್ಳಿ ಮಹದೇವಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಇದ್ದರು.

----------------

24ವೈಎಲ್‌ಡಿ ಚಿತ್ರ01 ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಪ್ರಾಥಮಿಕ ಸಹಕಾರ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಂ.ಪಿ.ನಿರಂಜನಮೂರ್ತಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net