ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಆಗ್ರಹ

6hnr1
Published on

ಹೊನ್ನಾವರ: ಕೇಂದ್ರ ಸರ್ಕಾರ ರೈತರ ಸಾಲ ಮರು ಪಾವತಿಸಲು ಆಗಸ್ಟ್​ವರೆಗೆ ನೀಡಿದ ಅವಧಿಯನ್ನು ವಿಸ್ತರಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ವತಿಯಿಂದ ಶುಕ್ರವಾರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಲಾಕ್​ಡೌನ್ ಜಾರಿಯಾದ ಬಳಿಕ ರೈತರು, ಬೆಳೆ ಮಾರಾಟ ಮಾಡಲು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಬೆಳೆ ಬೆಳೆಯಲು ಬ್ಯಾಂಕ್ ಮೂಲಕ ಸಾಲ ಮಾಡಿದ್ದರಿಂದ ಈ ಸಮಯದಲ್ಲಿ ಮರುಪಾವತಿಸಲು ಕಷ್ಟವಾಗುತ್ತದೆ. ರೈತರು ತಾವು ಬೆಳೆದ ಬೆಳೆಗೆ ಮಾರಾಟಕ್ಕೆ ಸೂಕ್ತ ಅವಕಾಶ ನೀಡಬೇಕು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸೂಕ್ತ ಸಲಹೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ, ಜಿ.ಪಂ. ಸದಸ್ಯ ದೀಪಕ ನಾಯ್ಕ, ತಾ.ಪಂ. ಸದಸ್ಯೆ ರೂಪಾ ಗೌಡ, ಕಿಸಾನ್ ಸಂಘದ ಸದಸ್ಯರಾದ ಚಂದ್ರಶೇಖರ ಗೌಡ, ಹರಿಶ್ಚಂದ್ರ ನಾಯ್ಕ, ದಯಾನಂದ ಹೆಗಡೆ, ಗಜಾನನ ನಾಯ್ಕ, ಕೆ.ಎಂ.ನಾಯ್ಕ, ಹನುಮಂತ ಪಟಗಾರ, ರವಿ ಪಟಗಾರ ಮತ್ತಿತರರು ಉಪಸ್ಥಿತರಿದ್ದರು. ತಹಸೀಲ್ದಾರ್ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net