

ಬಾಗಲಕೋಟೆ: ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಗಂಗೂರ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಬಾಲಹನಮಪ್ಪ ಮಂಗಳಪ್ಪ ತೆಗ್ಗಿ(೩೦) ಮೃತ ರೈತ ಎಂದು ಗುರುತಿಸಲಾಗಿದೆ. ಸ್ಥಳೀಯ ಪಿಕೆಪಿಎಸ್ ಹಾಗೂ ಕೆವಿಜಿ ಬ್ಯಾಂಕ್ ನಲ್ಲಿ ತಲಾ ೫೦ ಸಾವಿರ ರೂ. ಹಾಗೂ ಕೈಗಡ ಎರಡು ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹೊಲದಲ್ಲಿ ಹತ್ತಿ ಬೆಳೆಯಲು ದುಡ್ಡು ಬಳಕೆ ಮಾಡಿದ್ದ. ಆದರೆ, ಬೆಳೆ ಚನ್ನಾಗಿ ಬಾರದೇ ಇರುವುದರಿಂದ ಮನನೊಂದು ಮನೆಯ ಮುಂದೆ ಶುಕ್ರವಾರ ಸಂಜೆ ವಿಷ ಸೇವಿಸಿದ್ದ. ತಕ್ಷಣವೇ ಹುನಗುಂದ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ -Àಲಿಸದೇ ಶನಿವಾರ ಬೆಳಗ್ಗೆ ಸಾವನಪ್ಪಿದ್ದಾನೆ. ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.