ಸಾರಿಗೆ ನೌಕಕರ ವೇತನ ಪಾವತಿಸಲು ಕ್ರಮ ಕೈಗೊಳ್ಳಿ

bus new
Published on

--
ಶಕ್ತಿ ಯೋಜನೆ ಮೊತ್ತ ಸಕಾಲಕ್ಕೆ ನಿಗಮಕ್ಕೆ ಮರು ಪಾವತಿಸಲು ಸರ್ಕಾರಕ್ಕೆಮಂಡಳಿ ಆಗ್ರಹ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಾರಿಗೆ ನಿಗಮ ನೌಕರರಿಗೆ ಪ್ರತಿ ತಿಂಗಳು ಮೊದಲ ದಿನ ವೇತನ ಪಾವತಿಸಲಾಗುತ್ತಿದೆ. ಆದರೆ ಜುಲೈ ತಿಂಗಳಿನಿAದ ಇಲ್ಲಿಯವರೆಗೆ ಪಗಾರ ನೀಡಿಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಕಲ್ಯಾಣ ಕರ್ನಾಟಕ ನಿಗಮದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಣ್ಣಿ, ಗೌರವಾಧ್ಯಕ್ಷ ಭೀಮರಾವ ಯರಗೋಳ ಗೋಳು ತೋಡಿಕೊಂಡಿದ್ದಾರೆ.
ಜೂ. ೧೧ರಿಂದ  ಶಕ್ತಿ ಯೋಜನೆ ಜಾರಿಗೆ ಬಂದಿದ್ದು,  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಹಿಳೆಯರು ಪ್ರಯಾಣಿಸಿದ ಮೊತ್ತ ೪೭.೮೦ ಕೋಟಿ ರೂ. ಮರುಪಾವತಿಗೆ ಸರ್ಕಾರಕ್ಕೆ ಕೋರಿದೆ. ಅದರಲ್ಲಿ ಇದುವರೆಗೆ ೩೭.೩೩ ಕೋ.ರೂ. ನೀಡಿ, ಆರ್ಥಿಕ ಇಲಾಖೆ  ಆದೇಶ ಹೊರಡಿಸಿದೆ. ವಾಸ್ತವದಲ್ಲಿ ಮೊತ್ತ ನಿಗಮಕ್ಕೆ ಜಮೆಯಾಗಿಲ್ಲ.ಹೀಗಾಗಿ ಪಗಾರ ವಿಳಂಬವಾಗುತ್ತಿದೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.
 ನಿಗಮಗಳಿಗೆ ಸರ್ಕಾರ ಮೊತ್ತ ಜಮೆ ಆಗಿಲ್ಲ. ನೌಕರರ  ಹಲವು ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಈ ಕುರಿತು ಮುಖ್ಯಮಂತ್ರಿ ಜನಸ್ಪಂದನ ಕೋಶಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ, ನಮ್ಮ ಸಮಸ್ಯೆ ಪರಿಹಾರ ಕಂಡಿಲ್ಲ ಎಂದು ಹೇಳಿದರು.
ಪ್ರತಿ ತಿಂಗಳು ಸಾರಿಗೆ ನೌಕರರ ವೇತನ ಪಾವತಿಸಲು ಅನುವು ಮಾಡಲು ಮುಂಗಡವಾಗಿ ಶಕ್ತಿ ಯೋಜನೆ ಮೊತ್ತವನ್ನು ಪ್ರತಿ ತಿಂಗಳು ನಿಯಮಿತವಾಗಿ ನಿಗಮಗಳಿಗೆ ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಬೇಕು. ನಿಗಮದಿಂದ ನೌಕರರಿಗೆ ಆರ್ಥಿಕ ಸೌಲಭ್ಯ ಹಾಗೂ ಪರಿಶ್ರಮಕ್ಕೆ ತಕ್ಕಂತೆ ವೇತÀನ ನೀಡುವಲ್ಲಿ ವ್ಯತ್ಯಯ ಉಂಟಾಗುವುದು ತಪ್ಪಿಸಬೇಕು. ಸಂಸ್ಥೆ ಹಿತದೃಷ್ಟಿಯಿಂದ ಪ್ರಯಾಣದ ದರ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಇಲಾಖೆಯ ಕಾರ್ಮಿಕರ ೩೮ ತಿಂಗಳ ಹಿಂಬಾಕಿ ಮೊತ್ತವನ್ನು ಸರ್ಕಾರದಿಂದಲೇ ಪಾವತಿಸಬೇಕು. ನಿಗಮಕ್ಕೆ ನೇಮಕ ಮತ್ತು ವೃಂದ ನಿರ್ವಹಣೆ ಕುರಿತು ಸ್ವಾಯತ್ತತೆ ನೀಡಬೇಕು. ನಿವೃತ್ತಿ ಹೊಂದಿದ ಸಿಬ್ಬಂದಿಗೆ ತಕ್ಷಣ ಆರ್ಥಿಕ ಸೌಲಭ್ಯ ಪಾವತಿಸಬೇಕು. ಸಾರಿಗೆ ನಿಗಮಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸೈಯದ್ ಇಸ್ಮಾಯಿಲ್ ಪಟೇಲ್, ರಾಮಚಂದ್ರ ಹೈಯಾಳಕರ್,  ಚಂದ್ರಕಾAತ ಡೊಳ್ಳೆ, ಸೂರ್ಯಕಾಂತ ಸಿಂಗೆ, ನಾಗೇಂದ್ರ ಇದ್ದರು.
===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net