ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಿ

nodal officer visit photos (1)
Published on

ಕಲಬುರಗಿ: ವಾಟ್ಸ್ಆ್ಯಪ್ ಚಾನೆಲ್ ಸೇರಿ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿಗೆ ಮಾಧ್ಯಮ ಸಂಬಂಧಿತ ವಿಷಯಗಳ ಮೇಲ್ವಿಚಾರಣೆಯ ನೋಡಲ್ ಅಧಿಕಾರಿಯೂ ಆದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್ ಸೂಚಿಸಿದರು.

ವಾರ್ತಾ ಭವನದಲ್ಲಿ ಮೀಡಿಯಾ ಮಾನಿಟರಿಂಗ್ ಸೆಲ್‌ಗೆ ಭಾನುವಾರ ಭೇಟಿ ನೀಡಿದ ಅವರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕಾಸಿಗಾಗಿ ಸುದ್ದಿ ಪ್ರಸಾರಗೊಂಡಲ್ಲಿ ತಕ್ಷಣ ಎಂಸಿಎಂಸಿ ಸಮಿತಿಗೆ ತಿಳಿಸಿ. ಎಂಸಿಸಿ ಉಲ್ಲಂಘನೆ ಕಂಡುಬAದಲ್ಲಿ ತಕ್ಷಣವೇ ಕಾನೂನು ಕ್ರಮಕ್ಕಾಗಿ ಸಹಾಯಕ ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು ಎಂದರು.

ದಿನದ ೨೪ ಗಂಟೆ ಮುದ್ರಣ ಮಾಧ್ಯಮ, ಕೇಬಲ್ ಟಿವಿ, ರಾಜಕೀಯ ಪಕ್ಷ, ನಾಯಕ, ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ ಖಾತೆ ವೀಕ್ಷಿಸಬೇಕು. ಎಫ್‌ಎಂ ರೇಡಿಯೋ ಮೇಲೂ ನಿಗಾ ವಹಿಸಬೇಕು. ಜಾಹೀರಾತು ಪ್ರಕಟಗೊಂಡಲ್ಲಿ ಅದನ್ನು ಆಯಾ ಪಕ್ಷ, ಅಭ್ಯರ್ಥಿಗಳ ಲೆಕ್ಕಕ್ಕೆ ಖರ್ಚು ಹಾಕಿ ವೆಚ್ಚ ಸಮಿತಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಮತ್ತು ಜಿಲ್ಲಾ ಎಂಸಿಎAಸಿ ಸಮಿತಿ ಕಾರ್ಯದರ್ಶಿ ಸಿz್ದೆÃಶ್ವರಪ್ಪ ಜಿ.ಬಿ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net