ಸಾಮಾಜಿಕ ಜಾಗೃತಿ ಮೂಡಿಸಿದ ಸಂತ

mahayogi
ಕಡೂರಿನ ತಹಸೀಲ್ದಾರ್ ಕಚೇರಿಯಲ್ಲಿ ಶರಣ ಡಾ. ಮಹಾಂತ ಶಿವಯೋಗಿ ಜಯಂತಿಯನ್ನು ಮದ್ಯವ್ಯಸನಮುಕ್ತ ದಿನವಾಗಿ ಆಚರಿಸಲಾಯಿತು. ತಹಸೀಲ್ದಾರ್ ಕವಿರಾಜ್, ಡಾ. ರವಿಕುಮಾರ್, ಡಾ. ಉಮೇಶ್, ಕಲ್ಮರುಡಪ್ಪ, ತಮ್ಮಯ್ಯ ಇತರರಿದ್ದರು.
Published on

ಕಡೂರು: ದುಶ್ಚಟಮುಕ್ತ ಸಮಾಜ ನಿರ್ಮಿಸಲು ಕ್ರಾಂತಿಕಾರಕ ಬದಲಾವಣೆಗೆ ಶ್ರಮಿಸಿದ ಶರಣ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಕೊಡುಗೆ ಸಮಾಜಕ್ಕೆ ಅಪಾರ ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.

ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಶರಣ ಡಾ. ಮಹಾಂತ ಶಿವಯೋಗಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಮದ್ಯವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಗಳು ಇಳಕಲ್ ಮಠದ ಪೀಠಾಧಿಪತಿಗಳಾಗಿ ಹಣ ಅಥವಾ ಯಾವುದೆ ವಸ್ತುಗಳನ್ನು ಸ್ವೀಕರಿಸದೆ ಪ್ರತಿ ಗ್ರಾಮಕ್ಕೆ ಜೋಳಿಗೆ ಹಾಕಿಕೊಂಡು ಹೋಗಿ ಜನರ ದುಶ್ಚಟಗಳನ್ನು ಬಿಡಿಸುವ ಕಾರ್ಯಕ್ಕೆ ಮುಂದಾಗಿ ಸಾಕಷ್ಟು ಜನರ ಬಾಳಲ್ಲಿ ಬೆಳಕಾಗಿದ್ದರು. ಮೌಢ್ಯ ಆಚರಣೆಗಳಿಂದ ವಿಮುಕ್ತರಾಗಿಸಿ ಬದಲಾವಣೆಯ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟರು ಎಂದರು.
12ನೇ ಶತಮಾನದ ಬಸವಣ್ಣನವರ ವಿಚಾರಧಾರೆಗಳನ್ನು 20ನೇ ಶತಮಾನದಲ್ಲಿ ಕಾರ್ಯಗತ ಮಾಡುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಸಂತ ಎಂದು ಬಣ್ಣಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್, ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ. ಉಮೇಶ್, ಉಪ ತಹಸೀಲ್ದಾರ್ ಕಲ್ಮರುಡಪ್ಪ, ಜಿಪಂ ಎಇಇ ತಮ್ಮಯ್ಯ, ನಾಗರಾಜ್, ದಿಲೀಪ್, ತಿಪ್ಪೇಶ್, ಮಹೇಶ್ವರಪ್ಪ, ಮುಂಜಾನೆ ಮಂಜು, ಕೆ.ಡಿ.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net