ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಡಾ.ಅಂಬೇಡ್ಕರ

bkt-14-1
ಬಾಗಲಕೋಟೆ ನವನಗರದ ಸೆಕ್ಟರ್ ನಂ.೧೨ ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿ.ಪ ಸದಸ್ಯ ಪಿ.ಎಚ್.ಪೂಜಾರ, ಡಾ.ಶೇಖರ ಮಾನೆ, ವಿರುಪಾಕ್ಷ ಅಮೃತಕರ, ತಮ್ಮಣ್ಣ ಗಿರಿಜಾ, ಶಂಭುಗೌಡ ಪಾಟೀಲ, ರಾಜು ಶ್ರೀರಾಮ, ಸಂಗನಗೌಡ ಗೌಡರ ಇದ್ದರು.
Published on

ಬಾಗಲಕೋಟೆ: ಸಾಮಾಜಿಕ ಅಸಮಾನತೆ, ಅಸ್ಪÈಶತೆ ನಿವಾರಣೆಗೆ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ ಸಮಾಜಕ್ಕೆ ಒಳ್ಳೆಯದನ್ನು ಕೊಡಬೇಕೆನ್ನುವ ಉತ್ಕಟಕ್ಕೆ ಸಾಕ್ಷಿಯಾಗಿದ್ದಾರೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನವನಗರದ ಸೆಕ್ಟರ್ ನಂ.೧೨ ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಡಾ.ಅಂಬೇಡ್ಕರ ಜೀವನದುದ್ದಕ್ಕೂ ತುಳಿತಕ್ಕೊಳಗಾದವರ ಪರವಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಮಹಾಜ್ಞಾನಿಯಾಗಿದ್ದ ಅಂಬೇಡ್ಕರ್ ೯ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರ ಅಪಾರವಾದ ಜ್ಞಾನದ ಶಕ್ತಿ ಸಂವಿಧಾನ ರಚನೆಯಲ್ಲಿ ಅಡಕವಾಗಿದ್ದು, ಸಾಮಾಜಿಕ ಕಳಕಳಿಯ ಬದುಕಿನಿಂದಾಗಿ ಅವರು ಸಾರ್ಥಕ ಜೀವನ ಕಂಡರು ಎಂದರು.

ಡಾ.ಶೇಖರ ಮಾನೆ, ವಿರುಪಾಕ್ಷ ಅಮೃತಕರ ಅಂಬೇಡ್ಕರ ಜೀವನ, ಬದುಕು, ಸಾಮಾಜಿಕ ಕಳಕಳಿಯ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪೌರಕಾರ್ಮಿಕÀ ನಾಗಮ್ಮ ಪಾತ್ರೋಟಿ, ಸಮಾಜ ಸೇವಕರಾದ ಹರೀಶ ನಾರಾಯಣಿ, ರಾಜು ಕಟ್ಟಿಮನಿ, ಮಹಾದೇವಪ್ಪ ಪಲ್ಲೇದ ಅವರನ್ನು ಸನ್ಮಾನಿಸಲಾಯಿತು. ತಮ್ಮಣ್ಣ ಗಿರಿಜಾ, ಶಂಭುಗೌಡ ಪಾಟೀಲ, ರಾಜು ಶ್ರೀರಾಮ, ಸಂಗನಗೌಡ ಗೌಡರ, ಮಲ್ಲಿಕಾರ್ಜುನ ಪಾತ್ರೋಟಿ, ಗಣೇಶ ದೂದಾನಿ, ಸುಽÃರ ಜಾಧವ, ಮಂಜು ಬಳ್ಳೂರಗಿ, ಬಲ್ಲಿಸ್ವಾಮಿ ಸುರಪುರ, ರಾಜು ನಾಯಕ, ವೀರೇಶ ನಾಲತ್ತವಾಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net