ಸಾಧನೆಗೆ ಸಂದ ಗೌರವ

bkt-6-6
ಬಾಗಲಕೋಟೆ ನಗರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಅಂಬಾಜಿ ಸುಗತೇಕರ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮಹೇಶ ಅಂಗಡಿ ಅವರನ್ನು ಈಚೆಗೆ ಚರಂತಿಮಠ ಹಾಗೂ ವಸöದ -Ëಂಡೇಶನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Published on

ಬಾಗಲಕೋಟೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಅಂಬಾಜಿ ಸುಗತೇಕರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮಹೇಶ ಅಂಗಡಿ ಅವರನ್ನು ಈಚೆಗೆ ಚರಂತಿಮಠ ಹಾಗೂ ವಸöದ -Ëಂಡೇಶನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ಬಾಗಲಕೋಟೆಯ ಹೆಸರನ್ನು ರಾಷ್ಟçಮಟ್ಟದಲ್ಲಿ ಪಸರಿಸಿದ ಜಾನಪದ ಕ್ಷೇತ್ರ ಹಾಗೂ ಪಾರಂಪರಿಕ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾದ ಗೊಂದಳಿಪದಗಳ ಮೂಲಕವೇ ಪ್ರಖ್ಯಾತರಾದ ವೆಂಕಪ್ಪ ಅಂಬಾಜಿ ಸುಗತೇಕರ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಇಡೀ ಬಾಗಲಕೋಟೆ ಜನರಿಗೆ ಖುಷಿ ಕೋಡುವಂತಹದು ಎಂದರು.

ಇನ್ನು ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗದಲ್ಲಿ ಅಭೂತಪೂರ್ವ ಸಾಧನೆಗೈದ ಪತ್ರಕರ್ತರಾದ ಮಹೇಶ ಅಂಗಡಿಯವರ ಕಾರ್ಯ ವೈಖರಿಗೆ ಸಂದ ಗೌರವ ಇದಾಗಿದೆ ಎಂದು ಹೇಳಿದರು.

ಈ ವೇಳೆ ನಗರಸಭಾ ಸದಸ್ಯರಾದ ಚೆನ್ನವೀರ ಅಂಗಡಿ, ಕಳಕಪ್ಪ ಬಾದೋಡಗಿ, ದುಂಡಪ್ಪ ಎಳೆಮ್ಮಿ, ಗುರು ಅನಗವಾಡಿ, ಪ್ರಶಾಂತ ಸೋನಕನಾಳ, ಮುರಿಗೆಪ್ಪ ಸೋರಗಾಂವಿ, ಎಸ್.ವಿ.ಶೆಟ್ಟರ, ಮೃತ್ಯುಂಜಯ ಬಳುಲಮಠ, ನಿಂಗಪ್ಪ ಮೋಕಾಶಿ, ರಮೇಶ ಕೊಣ್ಣೂರ, ಅಶೋಕ ಮಹೇಂದ್ರಕರ, ಶ್ರೀಶೈಲ ಅಂಗಡಿ, ರವಿ ಬಡಿಗೇರ ಇತರರು ಇದ್ದರು. ವಿಜಯ ಸುಲಾಖೆ ನಿರೂಪಿಸಿದರು. ಶಿವಕುಮಾರ ಮೇಲ್ನಾಡ ವಂದನಾರ್ಪಣೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net