

ಕಲಬುರಗಿ: ಕೋರ್ಟ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಕೋರ್ಟ್ನಲ್ಲಿ ಸ್ಟೇನೋಗ್ರಾಫರ್ ಆಗಿರುವ ರಮೇಶ ದುರ್ಗಪ್ಪಗೆ ಬೆದರಿಕೆ ಹಾಕಲಾಗಿದೆ. ರಮೇಶ ಸಹೋದರಿ ನೇತ್ರಾವತಿ ಎಂಬುವರನ್ನು ಮುದಗಲ್‌ನ ಚಂದ್ರಣ್ಣ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆಸ್ತಿ ವಿಚಾರವಾಗಿ ಗಂಡನ ಸಂಬಂಧಿ ಶಿವರಾಜ ಎಂಬುವರು ಸಹೋದರಿ ಕೊಲೆ ಮಾಡಿದ್ದ. ಈಗ ಆತ ರಾಯಚೂರು ಜೈಲಿನಲ್ಲಿದ್ದು, ಸಾಕ್ಷಿ ಹೇಳದಂತೆ ನಿಂಗಪ್ಪ, ಈರಪ್ಪ, ಲಕ್ಷಿ ಹಾಗೂ ಗುಬ್ಬಮ್ಮ ಎಂಬುವರು ವಾಹನದಲ್ಲಿ ಬಂದು ಅಡ್ಡಗಟ್ಟಿ ಬೆದರಿಸಿದ್ದಾರೆ. ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.