

ಬಾಗಲಕೋಟೆ: ಯಾವುದೋ ಒಂದು ಮರ್ಡರ್ ಆಗಿದ್ದಾಗ ಸರಿಯಾದ ಸಾಕ್ಷಿ ಇಲ್ಲದೇ ಪ್ರಕರಣ ಖುಲಾಸೆ ಆಗುತ್ತದೆ. ಆಗಂತ ಮರ್ಡರ್ ಆಗಿರಲ್ವಾ? ಇಲ್ಲಿ ಸಾಮಾನ್ಯ ಪ್ರಜ್ಞೆ ಬಳಕೆ ಮಾಡಬೇಕು.
ಬಿಜೆಪಿ ಸರ್ಕಾರದಲ್ಲಿ ಶೇ. ೪೦ ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಲ್ಲಿ ಬಂದಿರುವ ಬಗ್ಗೆ ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ವ್ಯಾಖ್ಯಾನಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. ೪೦ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಅವರು. ಅದರ ಮೇಲೆ ನಾವು ಆರೋಪ ಮಾಡಿದ್ದೇವು. ಅದಕ್ಕಾಗಿ ಒಂದು ಆಯೋಗ ರಚನೆ ಮಾಡಿದ್ದು, ಈಗ ತನಿಖಾ ವರದಿ ಏನು ಬಂದಿದೆ ಎಂದು ನಾನು ಇನ್ನೂ ನೋಡಿಲ್ಲ. ನೋಡಿದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದರು.
ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ ಎಂದು ಬಿಜೆಪಿಯವರ ಮಾತು ಕೇಳಿ ನನ್ನನ್ನು ನೀವು ಕೇಳಬೇಡಿ ಎಂದು ಪತ್ರಕರ್ತರಿಗೆ ಖಾರವಾಗಿ ಹೇಳಿದ ಸಿಎಂ, ಅನೇಕ ಪ್ರಕರಣಗಳಲ್ಲಿ ಸೂಕ್ತ ಸಾಕ್ಷಿಗಳು ಇಲ್ಲದೇ ವಜಾ ಆಗುತ್ತವೆ. ಆಗಂತ ಅಲ್ಲಿ ತಪ್ಪೇ ಆಗಿಲ್ಲ ಎಂದಲ್ಲ. ಅದು ಸಾಬೀತು ಆಗಿರಲ್ಲ ಅಷ್ಟೆ. ಬೆನ್‌ಪಿಟ್ ಆಪ್ ಡೌಟ್ಸ್ ಶುಡ್ ಗೋ ಟು ಆಕ್ಯೂಜ್ಡ್ ಪರ್ಸನ್. ನಾಟು ಟು ದ ಕಂಪ್ಲೇನಂಟ್. ಇದು ಕ್ರಿಮಿನಲ್ ಪ್ರಸ್ಯೂಜರ್ ಕೋಡ್‌ನ ಬೇಸಿಕ್ ಅರ್ಥ ಆಯ್ತಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಶೇ.೪೦ ಕಮಿಷನ್ ಆರೋಪಕ್ಕೆ ಮರ್ಡರ್ ಕೇಸ್ ಹೋಲಿಕೆ ಮಾಡಿದರು.