ಸಹಕಾರಿ ಸಂಘದಿಂದ ಅಗತ್ಯ ಸಾಮಗ್ರಿ ವಿತರಣೆ

7KMT1
Published on

ಕುಮಟಾ: ಮೂರೂರಿನ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಮನೆಮನೆಗೆ ಜೀವನಾವಶ್ಯಕ ಸಾಮಗ್ರಿ ವಿತರಣೆಗೆ ಮಂಗಳವಾರ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ವಿ. ಹೆಗಡೆ ಭದ್ರನ್, ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನತೆ ದಿನನಿತ್ಯದ ಅಗತ್ಯಗಳಿಗೆ ಪರದಾಡುವಂತಾಗಬಾರದು ಎಂಬ ಉದ್ದೇಶದಿಂದ ನಮ್ಮ ವ್ಯವಸಾಯ ಸೇವಾ ಸಹಕಾರಿ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕೆಲಸ ಆರಂಭಿಸಿದ್ದೇವೆ. ಇದರಿಂದ ಗ್ರಾಮಸ್ಥರು ಅನಗತ್ಯ ಹೊರಗೆ ಓಡಾಡುವುದು ತಪ್ಪುತ್ತದೆ ಮತ್ತು ಎಲ್ಲರಿಗೂ ಅಗತ್ಯ ಸಾಮಗ್ರಿಗಳ ಕೊರತೆಯಾಗದು ಎಂದರು. ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಹೆಗಡೆ, ಸದಸ್ಯರಾದ ಹರೀಶ ಭಟ್ಟ, ಟಿ.ವಿ. ಹೆಗಡೆ, ಗಣಪತಿ ನಾಯ್ಕ, ಶ್ರೀಧರ ಹೆಗಡೆ, ರಾಘವೇಂದ್ರ ಹೆಗಡೆ, ವ್ಯವಸ್ಥಾಪಕ ಅರುಣ ಪಂಡಿತ ಹಾಗೂ ಸಿಬ್ಬಂದಿ ಇದ್ದರು. ಮೂರೂರು ಸಹಕಾರಿ ಸಂಘದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net