ಸಹಕಾರ, ಸಂಘಟನೆಯಲ್ಲಿ ಬಲವಿದೆ

RBK-30-1
ಬನಹಟ್ಟಿಯ ವಿಠ್ಠಲ ಮಂದಿರ ಗಲ್ಲಿಯಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷೆ ವಿದ್ಯಾ ದಬಾಡಿ, ಮೋಹನ ಪತ್ತಾರ, ಕಿರಣ ಆಳಗಿ ಇದ್ದರು.
Published on

ಬಾಗಲಕೋಟೆ: ಸಹಕಾರ ಸಂಘಟನೆಯಲ್ಲಿ ಬಲವಿದೆ ಎಂಬುದಕ್ಕೆ ತಾವು ಆಯೋಜಿಸಿರುವ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಶ್ರೀಶೈಲ ಬೀಳಗಿ ಹೇಳಿದರು.

ಸೋಮವಾರ ರಾತ್ರಿ ಬನಹಟ್ಟಿಯ ವಿಠ್ಠಲ ಮಂದಿರ ಗಲ್ಲಿಯಲ್ಲಿ ದುರ್ಗಾದೇವಿ ಉತ್ಸವ ಸಮಿತಿಯರು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ವಿಠ್ಠಲ ಮಂದಿರ ಗಲ್ಲಿಯ ಹಿರಿಯರು ಒಂದಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಪ್ರತಿ ವರ್ಷ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿ ಸಮಾಜಕ್ಕೆ ಒಂದು ಸಂದೇಶ ಕೊಡುತ್ತಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಮೋಹನ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ವಿದ್ಯಾ ಧಬಾಡಿ, ಕಿರಣ ಆಳಗಿ, ಬಿ.ಕೆ. ಬಿದರಿ, ಮಹಾದೇವ ಬಾಗಲಕೋಟ, ಈರಣ್ಣ ಕೊಣ್ಣೂರ, ಬಸವರಾಜ ಕೊಟ್ಟೂರ, ಈರಣ್ಣ ಬಾಣಕಾರ, ವಿನಯ ಮಂಡಿ, ಮಲ್ಲಿಕಾರ್ಜುನ ಜಾಡಗೌಡ, ಅಚ್ಯುತ ಪತ್ತಾರ, ಚಿದಾನಂದ ಪತ್ತಾರ, ಲಲಿತಾ ಬಶೆಟ್ಟಿ, ಶ್ರೀದೇವಿ ಕೊಟ್ಟೂರ, ಅಶ್ವಿನಿ ಬಾಣಕಾರ, ಮಹಾದೇವಿ ಮಂಡಿ, ರಾಜೇಶ್ವರಿ ಬಾಣಕಾರ, ಲಲಿತಾ ಪತ್ತಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net