ಸಹಕಾರ ಸಂಘಗಳು ರೈತನ ಬೆನ್ನುಲುಬು

10HDK0005 (1)
Published on

ಎಚ್.ಡಿ. ಕೋಟೆ: ಸಹಕಾರ ಸಂಘಗಳು ರೈತನ ಬೆನ್ನುಲುಬಾಗಿ ನಿಂತಿವೆ ಎಂದು ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ವೆಂಕಟಾಚಲ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಥಮಿಕ ಸಹಕಾರ ಸಂಘಗಳು ತಾಲೂಕು ಮಟ್ಟದ ಎಂಡಿಸಿಸಿ ಬ್ಯಾಂಕ್‌ಗಳಿಗೆ ಬೆನ್ನುಲುಬಾಗಿ ನಿಂತಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘದ ಮೂಲಕ ರೈತರಿಗೆ ಸಾಲ ನೀಡುವ ಬೇಡಿಕೆಯನ್ನು ಸಹಕಾರ ಸಂಘ ನೀಡಿದೆ. ಬ್ಯಾಂಕ್‌ನ ಅಧಿಕಾರಿಗಳ ಬಳಿ ಮಾತನಾಡಿ ಹೆಚ್ಚಿನ ಸಾಲ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಶರಥ ಮಾತನಾಡಿ, ನಾನು ಕಳೆದ ಹತ್ತು ವರ್ಷದಿಂದ ಅಧ್ಯಕ್ಷನಾಗಿದ್ದು, ನಾನು ಅಧ್ಯಕ್ಷನಾದ ಸಂದರ್ಭದಲ್ಲಿ 60 ಲಕ್ಷ ರೂ.ಸಾಲ ನೀಡಲಾಗಿತ್ತು. ಪ್ರಸ್ತುತ 3.50 ಕೋಟಿ ರೂ.ಸಾಲವನ್ನು ರೈತರಿಗೆ ನೀಡಲಾಗಿದೆ. ಸಹಕಾರ ಸಂಘವನ್ನು ನನ್ನ ಮನೆಯಂತೆ ತಿಳಿದು ಕೆಲಸ ಮಾಡಿದ್ದೇನೆ. ಇದಕ್ಕೆ ಸಂಘದ ಎಲ್ಲ ನಿರ್ದೇಶಕರ ಸಹಕಾರವಿದೆ ಎಂದರು.

ಮುಖಂಡ ವೈ.ಟಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಸಣ್ಣ ಜಾಗದಿಂದ ಆರಂಭವಾದ ಸಹಕಾರ ಸಂಘವು ಹಲವು ಮುಖಂಡರ ಸಹಕಾರದಿಂದ ಇಂದು ಉತ್ತಮ ಕಟ್ಟಡ ನಿರ್ಮಾಣವಾಗಿದೆ. ನಮ್ಮ ಸಹಕಾರ ಸಂಘದ ಮೂಲಕ ನೂರಾರು ರೈತರಿಗೆ ಕೋಟ್ಯಂತರ ರೂ. ಕೃಷಿ ಸಾಲ ನೀಡಲಾಗಿದೆ ಎಂದರು.

ಎಂಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಚಂದ್ರು, ಉಪಾಧ್ಯಕ್ಷ ಕುಮಾರ್, ಎಚ್.ಆರ್.ಶ್ರೀನಿವಾಸರಾಜು, ಶಂಕರಲಿಂಗೇಗೌಡ, ಕೆ.ಜೆ. ರಾಮಕೃಷ್ಣೇಗೌಡ, ವಿರೇಂದ್ರಕುಮಾರ್, ಮಂಚನಾಯಕ, ಚಲುವರಾಜು, ಚೆನ್ನಾಜಮ್ಮ, ಶಂಭೂಗೌಡ, ಪುನೀತ್, ಶಫೀವುಲ್ಲಾ, ಲಕ್ಷ್ಮಮ್ಮ, ಮಹೇಶ್, ಶಿವರಾಜು, ರಂಗಸ್ವಾಮಿ, ಆನಂದ, ಈಶ್ವರೇಗೌಡ, ಸೊಮೇಗೌಡ, ಮಹದೇವೇಗೌಡ, ನಾಗರಾಜು, ನಾಗನಹಳ್ಳಿ ಪ್ರದೀಪ್, ಗೊಬ್ಬರದ ಅಂಗಡಿ ರಾಜೇಂದ್ರ, ಪುಟ್ಟಸ್ವಾಮಪ್ಪ, ಸಿದ್ದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net