

ಬಾಗಲಕೋಟೆ: ಜೀವ ಸಂಕುಲದ ಉಳಿವು ಸಸ್ಯಗಳಿಂದಲೇ ಆದ ಕಾರಣ ಸಸ್ಯ ಸಂಕುಲದ ಉಳಿವಿಗೆ ನಿರಂತರ ಸಂಶೋಧನೆ ಅಗತ್ಯವಾಗಿದೆ ಎಂದು ತೋವಿವಿ ಅನ್ವಿಕ ಜೀವಶಾಸö, ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಸಂಶೋಧಕ ಡಾ. ಮಹಾಂತೇಶ ನಾಯಕ ಬಿ.ಎನ್ ಹೇಳಿದರು.
ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಸ್ಯಶಾಸö ಸ್ನಾತಕೋತ್ತರ ವಿಭಾಗ, ಸಂಶೋಧನಾ ಮತ್ತು ಅಭಿವೃದ್ಧಿ ಕೋಶ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನ ಹಾಗೂ ಬೌದ್ಧಿಕ ಆಸ್ತಿಯ ಹಕ್ಕು ಕುರಿತು ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಸ್ಯಶಾಸö ಬಹಳಷ್ಟು ವಿಸ್ತಾರವಾಗಿದೆ. ಇಲ್ಲಿ ಸಂಶೋಧನೆಗೆ ಹಲವು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ನಿರಂತರವಾಗಿ ನಡೆದಿವೆ. ಸಂಶೋಧನೆ ಸಮಾಜಕ್ಕೆ ಉಪಯೋಗವಾಗಬೇಕು ಮತ್ತು ಸಸ್ಯಗಳ ಉಳಿವು ಇಂದು ಅವಶ್ಯವಾಗಿದೆ ಎಂದರು.
ತೋವಿವಿ ಪ್ರಾಧ್ಯಾಪಕ ಡಾ. ನಾಗರಾಜ ಹೊಳೆಯನ್ನವರ ಮಾತನಾಡಿ, ಸಂಶೋಧನಾ ಲೇಖನ, ಪ್ರಾಜೆಕ್ಟ್ ಹಾಗೂ ಪ್ರಬಂಧಗಳ ರಚನೆಗಳಲ್ಲಿ ಭಾಷೆಯ ಬಳಕೆ ಬಹಳಷ್ಟು ಮುಖ್ಯವಾಗಿದೆ ಎಂದರು.
ಸಂಶೋಧನೆಯಲ್ಲಿ ಭೌದ್ಧಿಕ ಆಸ್ತಿ ಹಕ್ಕು ವ್ಯಾಪ್ತಿ ಕುರಿತು ಡಾ. ಭಾರತಿ ಮೇಟಿ, ಸಂಶೋಧನಾ ವಿಶ್ಲೇಷಣೆಯಲ್ಲಿ ಆರ್ ತಂತ್ರಾAಶದ ಅನ್ವಯ ಎಂಬ ವಿಷಯದ ಕುರಿತು ಪ್ರಾಧ್ಯಾಪಕ ರಮೇಶ, ಸಂಶೋಧನೆಗೆ ವೈಜ್ಞಾನಿಕತೆ ಅವಶ್ಯಕ ಕುರಿತು ಡಾ. ಚಂದ್ರಶೇಖರ್ ವ್ಹಿ.ಎಂ. ಉಪನ್ಯಾಸ ನೀಡಿದರು.
ಪ್ರಾಚಾರ್ಯ ಎಸ್.ಜೆ. ಒಡೆಯರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಪಡೆಯುವುದು ಬಹು ಮುಖ್ಯ ಪ್ರತಿಯೊಂದರಲ್ಲಿ ನಾವು ಕ್ರಿಯಾತ್ಮಕವಾಗಿ ಪಾಲ್ಗೊಂಡಾಗ ಆ ಕಾರ್ಯ ಹೆಚ್ಚು ಅರ್ಥಪೂರ್ಣವಾಗಿರುವುದಲ್ಲದೆ ಜೀವನದಲ್ಲಿ ಸಫಲತೆಯನ್ನು ಹೊಂದಬಹುದು ಎಂದರು.
ಸಂಶೋಧನಾ ಮತ್ತು ಅಭಿವೃದ್ಧಿ ಘಟಕದ ಸಂಯೋಜಕ ಡಾ. ಜಿ.ಐ.ನಂದಿಕೋಲಮಠ, ಪ್ರಾಧ್ಯಾಪಕಿ ವಿ.ಬಿ.ಪೋಲಿಸ್ ಪಾಟೀಲ ಉಪಸ್ಥಿತರಿದ್ದರು. ಪೂಜಾ ಕುಲಕರ್ಣಿ ನಿರೂಪಿಸಿದರು. ಪಾರ್ವತಿ ಮತ್ತು ಶಿವಲೀಲಾ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕ ಪಿ.ಕೆ. ಚೌಗುಲ ಸ್ವಾಗತಿಸಿದರು. ಡಾ.ಎ.ಕೆ.ಮಾರಿಹಾಳ ಪರಿಚಯಿಸಿದರು.