ಸವಾಲನ್ನು ಮೆಟ್ಟಿ ನಿಂತರೆ ಸಾಧನೆ

COLLEGE NEWS
Published on

ಸಾಲಿಗ್ರಾಮ: ವಿದ್ಯಾರ್ಥಿಗಳ ಜೀವನದಲ್ಲೂ ಸಾಕಷ್ಟು ಕಷ್ಟ-ಸುಖ, ನೋವು-ನಲಿವು, ಸವಾಲುಗಳು ಎದುರಾಗುತ್ತವೆ. ಅವೆಲ್ಲವನ್ನೂ ದಾಟಿ ಬಂದವ ದೊಡ್ಡ ಸಾಧನೆ ಮಾಡುತ್ತಾನೆ ಎಂದು ಪ್ರಾಂಶುಪಾಲೆ ಡಾ.ಹಂಸವೇಣಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕ ಎ.ಎಸ್.ರಾಜೇಶ್, ಮಾತನಾಡಿ ವಿದ್ಯಾರ್ಥಿಗಳ ಜೀವನ ಎಂಬುದು ಒಂದು ಸುಂದರವಾದ ಪಯಣ. ಈ ಪಯಣದಲ್ಲಿ ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ಎದುರಿಸುತ್ತೀರಿ. ಧೃತಿಗೆಡದೆ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ. ಉತ್ತಮ ಶಿಕ್ಷಣ ಪಡೆಯಲು ಸಾಗುತ್ತಿರುವುದರಿಂದ ಕುಗ್ಗಬೇಡಿ. ಪ್ರತಿಯೊಂದು ಸೋಲಿನಲ್ಲೂ ಒಂದು ಪಾಠವಿರುತ್ತದೆ. ಆ ಪಾಠವನ್ನು ಕಲಿತು ಮುಂದೆ ಸಾಗಿ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಲಕ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅವುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಿ. ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಪಡೆಯುವುದು ದೊಡ್ಡ ಸವಾಲು. ಅದೇ ರೀತಿ ನಿಮ್ಮ ಮನಸ್ಸನ್ನು ವಿದ್ಯಾಭ್ಯಾಸದ ಕಡೆಯಿಂದ ಬಿಟ್ಟು ಬೇರೆ ಕಡೆ ಹೋಗದಂತೆ ಹಿಡಿತದಲ್ಲಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿದೆ. ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ. ನಕಾರಾತ್ಮಕ ಆಲೋಚನೆಗಳನ್ನು ದೂರವಿಡಿ ಎಂದು ಕಿವಿ ಮಾತು ಹೇಳಿದರು.

ಗ್ರಂಥಾಪಾಲಕ ಜಿ.ಟಿ.ಮಹೇಶ್, ದೈಹಿಕ ಶಿಕ್ಷಣ ನಿರ್ದೇಶಕಿ ಗಾಯತ್ರಿ, ಸಂಪನ್ಮೂಲ ವ್ಯಕ್ತಿಗಳಾದ ಶೇಖರ್ ಹೊಡೆನೂರು, ಸುರೇಶ್ ಛಲವಾದಿ, ಶ್ರೀನಿವಾಸ್, ಅಧ್ಯಾಪಕರಾದ ರಾಜೇಶ್, ರಾಜಶೇಖರ್, ಕುಮಾರಸ್ವಾಮಿ, ಮಂಜುನಾಥ್, ಪ್ರತಿಮಾ, ತಾಸೀನ್ ತಾಜ್, ಸತ್ಯ ನಾರಾಯಣ್, ಸುವರ್ಣಾ, ಸೋಮು, ಚಂದ್ರಕುಮಾರ್, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net