

ಕಲಬುರಗಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ಸರ್ವಧರ್ಮಗಳ ಪಠಣ, ಸದ್ಭಾವನಾ ಗೀತ ಗಾಯನ, ಬಾಪೂಜಿ ಪ್ರಬಂಧ ಸ್ಪರ್ಧೇಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ, ಪ್ರರಶಸ್ತಿ ವಿತರಣೆ ಹೀಗೆ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇನ್ನೂ ಕಾರ್ಯಕ್ರಮದ ವೇದಿಕೆ ಮೇಲೆ ಗಾಂಧಿ ವೇಷಧಾರಿಯಲ್ಲಿ ಬಾಲಕ ಕುಳಿತು ಚರಕ ನೂಲಿದ್ದು, ಲಾಲ್ ಬಹಾದ್ದೂರ ಶಾಸ್ತ್ರಿ ವೇಷಧಾರಿಯಾಗಿ ನಿಂತಿದ್ದ ಇನ್ನೋರ್ವ ಪುಟ್ಟ ಬಾಲಕ ಎಲ್ಲರ ಗಮನ ಸೆಳೆದರು.
ಕಲಬುರಗಿ ನಗರದ ಡಾ. ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ "ಮಹಾತ್ಮ ಗಾಂಧೀಜಿ 154ನೇ ಜನ್ಮ ವರ್ಷಾಚರಣೆ” ಅಂಗವಾಗಿ ಗಾಂಧೀಜಿ ಅವರ ತತ್ವ-ಸಂದೇಶ ಕುರಿತು ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ ಹಾಗೂ ಸರ್ವಧರ್ಮ ಪ್ರಾರ್ಥನೆ-ಸದ್ಭಾವನಾ ಗೀತಗಾಯನ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.