ಸರ್ಕಾರಿ ವಾಹನದ ಮೇಲೆ ಯುವತಿ ಫೋಟೋ ಶೂಟ್

27SIRSI4
Published on

ಶಿರಸಿ: ಶಿರಸಿ ಅರಣ್ಯ ವಿಭಾಗದ ವಾಹನದ ಮೇಲೆ ಯುವತಿಯೊಬ್ಬಳು ವಿವಿಧ ಭಂಗಿಯಲ್ಲಿ ಕುಳಿತು ಫೋಟೋ ಶೂಟ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಯಲ್ಲಾಪುರ ಎಸಿಎಫ್ ಅವರಿಗೆ ಸೇರಿದ ವಾಹನ ಇದಾಗಿದ್ದು, ಯುವತಿ ಈ ವಾಹನದ ಮೇಲೆ ಕುಳಿತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸರ್ಕಾರಿ ವಾಹನವನ್ನು ಫೋಟೋ ಶೂಟ್​ಗೆ ಬಳಸಿಕೊಂಡ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ವಾಹನ ದುರ್ಬಳಕೆ ಮಾಡಲಾಗಿದೆ ಎಂಬ ಆಕ್ಷೇಪ ಹೆಚ್ಚಿದಂತೆ ಎಚ್ಚೆತ್ತ ಇಲಾಖೆ ಅಧಿಕಾರಿಗಳು, ಫೋಟೋ ಶೂಟ್ ಮಾಡಿಸಿಕೊಂಡವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನಿಂದ ಬಂದ ಅಧ್ಯಯನ ತಂಡವನ್ನು ಮುಂಡಗೋಡಕ್ಕೆ ಬಿಡಲು ಈ ವಾಹನ ಕೊಂಡೊಯ್ಯಲಾಗಿತ್ತು. ಆದರೆ, ಇನ್ಶೂರೆನ್ಸ್ ಮುಗಿದ ಕಾರಣ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಬೇರೆ ವಾಹನದ ಮೂಲಕ ಅವರನ್ನು ಕರೆದೊಯ್ದಿದ್ದ. ಈ ರಸ್ತೆಯಲ್ಲಿ ಬಂದವರು ಯಾರೋ ವಾಹನದ ಮೇಲೆ ಹತ್ತಿ ಫೋಟೋ ಶೂಟ್ ಮಾಡಿದ್ದಾರೆ. ಈ ಬಗ್ಗೆ ಕ್ರಮವಹಿಸಲು ಪ್ರಕರಣ ದಾಖಲಿಸಲಾಗಿದೆ. | ಗೋಪಾಲಕೃಷ್ಣ ಹೆಗಡೆ ಡಿಎಫ್​ಒ ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net