ನಾಪೋಕ್ಲು: ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ ಮೂರ್ನಾಡು, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಶ್ರಮದಾನ ನಡೆಯಿತು.
ಮೂರ್ನಾಡಿನ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ ಬಣ್ಣ ಹೊಡೆದು ಆವರಣದಲ್ಲಿದ್ದ ಗಿಡ ಗಂಟಿಗಳನ್ನು ತೆರವು ಮಾಡಿದರು. ಮುಖ್ಯ ಶಿಕ್ಷಕಿ ದೇಚಮ್ಮ ಹರ್ಷ ವ್ಯಕ್ತಪಡಿಸಿ, ಇದೇ ರೀತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಂಥ ಶಕ್ತಿ ಭಗವಂತ ನೀಡಲಿ ಎಂದು ಆಶಿಸಿದರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಸದಸ್ಯರು ತ್ರೀನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಸಜನ್ ಗಣಪತಿ, ನಿವೃತ್ತ ಶಿಕ್ಷಕ ಗುರುರಾಜು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.