ಸರ್ಕಾರದ ನಿರ್ಲಕ್ಷ್ಯ ವಿಶ್ವಕರ್ಮ ಸಮಾಜ ಸಹಿಸಲ್ಲ

07bgkp02 Protest
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯ ಪ್ರಕರಣಕ್ಕೆ ಸಂಬAಧಪಟ್ಟAತಗೆ ಸರ್ಕಾರದ ನಿರ್ಲಕ್ಷ್ಯವನ್ನು ಸಮಾಜ ಸಹಿಸುವುದಿಲ್ಲ. ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಽಸಬೇಕು. ಸಚಿನ್ ಅವರ ಬಡ ಕುಟುಂಬಕ್ಕೆ ನೇರವಾಗಬೇಕೆಂದು ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಮಠಾಽಪತಿಗಳ ಹಾಗೂ ಪೀಠಾಽÃಪತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಮುರನಾಳ ಮಳೇರಾಜೇಂದ್ರಸ್ವಾಮಿ ಮಠ ಜಗನ್ನಾಥ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.

ಸಚಿನ್ ಆತ್ಮಹತ್ಯೆ ಪ್ರಕರಣ ಖಂಡಿಸಿ ಬಾಗಲಕೋಟೆ ಜಿಲ್ಲಾ ವಿಶ್ವಕರ್ಮ ಸಮಾಜ, ನಗರದ ವಿಶ್ಚಕರ್ಮ ಸಮಾಜ ಸಂಘ, ಸುವರ್ಣಕಾರ ಸಂಘ, ಗಜಾನನ ತರುಣ ಸಂಘ, ವಿದ್ಯಾ ವಿಕಾಸ ಸಂಸ್ಥೆ ಮಹಿಳಾ ಮಂಡಳದಿAದ ಮಂಗಳವಾರ ಜಿಲ್ಲಾಡಳಿತ ಭವನದ ಮುಂದೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪದೇ ಪದೆ ಇಂಥ ಘಟನೆಗಳು ನಡೆಯುತ್ತಿವೆ. ಇಲ್ಲಿ ಸರ್ಕಾರದ ನಿರ್ಲಕ್ಷ್ಯ ಸಲ್ಲದು. ಇಡೀ ಪ್ರಕರಣವನ್ನು ಮುಚ್ಚಿಹಾಕುವ ಕೆಲಸಕ್ಕೆ ಮುಂದಾಗದೇ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ನ್ಯಾಯ ಒದಗಿಸಬೇಕು. ನಮ್ಮ ಸಮಾಜ ಚಿಕ್ಕದಿದ್ದರೂ ಇಡೀ ಸಮಾಜ ರೊಚ್ಚಿಗೆದ್ದರೆ ಸರ್ಕಾರವನ್ನು ಉರುಳಿಸುವ ಶಕ್ತಿ ವಿಶ್ವಕರ್ಮ ಸಮಾಜಕ್ಕೆ ಇದೆ ಎನ್ನುವುದನ್ನು ಮರೆಯಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಗದ್ದನಕೇರಿ ಮಠ ಶ್ರೀ ಮಳೆಯಪ್ಪಯ್ಯ ಸ್ವಾಮೀಜಿ ಮಾತನಾಡಿ, ಸಚಿನ್ ಸಾವಿಗೆ ನ್ಯಾಯ ಸಿಗುವರೆಗೂ ಹೋರಾಟ ನಿರಂತರವಾಗಿರುತ್ತದೆ. ಬಡ ಗುತ್ತಿಗೆದಾರನಾಗಿದ್ದ ಸಚಿನ್ ಪಂಚಾಳ ಆತ್ಮಹತ್ಯಗೆ ಕಾರಣರಾದವರನ್ನು ಬಂಽಸಿ ಶಿಕ್ಷೆ ವಿಽಸಬೇಕೆಂದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ ಪತ್ತಾರ ಕೆರೂರ, ವಿಶ್ವಕರ್ಮ ವಂಶಿ ಸೇನಾ ರಾಜ್ಯಧ್ಯಕ್ಷ ಮಲ್ಲಿಕಾರ್ಜುನ ಪತ್ತಾರ ಸಂಶಿ, ನಾಗೇಶ ಬರಗಿ, ಸಂಗಣ್ಣ ಹಡಗಲಿ, ಶ್ರೀಕಾಂತ ಪತ್ತಾರ, ನೀತಿನ ಪತ್ತಾರ, ಮೌನೇಶ ಪತ್ತಾರ, ಮೌನೇಶ ಬಡಿಗೇರ, ಸಿ.ಎಂ.ಪತ್ತಾರ, ಸಂಜು ಪತ್ತಾರ, ಮೌನೇಶ ಹೆರಕಲ್, ವಿನೋದ ಸೋನಾರ, ರವಿ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆಗೂ ಮುನ್ನ ಎನ್‌ಡಬ್ಲು ಕೆಆರ್‌ಟಿಸಿ ಘಟಕದಿಂದ ಪ್ರತಿಭಟನಾಕಾರರು ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಅಲ್ಲಿ ಸಭೆ ನಡೆಸಿ, ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net