ಸರ್ಕಾರ ವಿಳಂಬ ಧೋರಣೆ ಸಲ್ಲ

bkt-22-3
ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಕುಮಾರ ಯಡಗಳ್ಳಿ, ವಿ.ಜಿ.ರೇವಡಿಗಾರ, ವಿರುಪಾಕ್ಷ ಹಿರೇಮಠ, ಶಿವಾನಂದ ಬಿದರಿ, ಸುಬ್ಬರಾಯಗೌಡ ಪಾಟೀಲ, ಎಸ್.ಎನ್.ಮುತ್ತಗಿ ಇತರರು ಇದ್ದರು.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ -೩ ಹಂತ ಶೀಘ್ರ ಅನುಷ್ಠಾನಗೊಳಿಸಬೇಕು ಹಾಗೂ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಿಸಾನ್ ಸಂಘದ ಕಾರ್ಯಕರ್ತರ ಅಪರ ಜಿಲ್ಲಾಽಕಾರಿ ಸಂತೋಷ ಜಗಲಾಸರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜೀವನದಿ ಕೃಷ್ಣಾ ನದಿ ನೀರು ಸದ್ಬಳಕೆಯಾಗುತ್ತಿಲ್ಲ. ಯುಕೆಪಿ ಮೂರನೇ ಹಂತ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಳಂಭ ಧೋರಣೆ ಅನುಸರಿಸುತ್ತಿದೆ. ಶೀಘ್ರ ಗತಿಯಲ್ಲಿ ಯೋಜನೆ ಆರಂಭಿಸಬೇಕು, ಮುಳಗಡೆಯಾಗುವ ಜಮೀನುಗಳ ರೈತರಿಗೆ ವೈಜ್ಞಾನಿ ಪರಿಹಾರ ಒದಗಿಸಬೇಕು. ಪ್ರವಾಹ ಬಾಽತ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಘಟಪ್ರಭಾ, ಮಲಪ್ರಭಾ ನದಿಯ ಎಡದಂಡೆ, ಬಲದಂಡೆ ಕಾಲುವೆಗಳು ನಿರ್ಮಿಸಿ ೩೦ ವರ್ಷವಾದರು ನೀರು ಹರಿದಿಲ್ಲ. ಕೂಡಲೇ ಅವುಗಳನ್ನು ದುರಸ್ತಿಗೊಳಿಸಿ ನೀರು ಹರಿಸಬೇಕು. ಕಬ್ಬಿನ ಬಾಕಿ ಬಿಲ್ ಪಾವತಿಸಿ ಪ್ರಸಕ್ತ ಹಂಗಾಮ ಆರಂಭಿಸಬೇಕು, ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ. ೭೦ ರಷ್ಟು ರೈತರಿಗೆ ನೀಡಬೇಕು, ಪ್ರತಿ ಟನ್ ಕಬ್ಬಿಗೆ ೫ ಸಾವಿರ ರೂ. ಬೆಲೆ ನೀಡಬೇಕು, ಪ್ರವಾಹ, ಬರ, ಅತಿವೃಷ್ಠಿ ಅಂತಹ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ಬೆಳೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಮುಖಂಡರಾದ ಕುಮಾರ ಯಡಗಳ್ಳಿ, ವಿ.ಜಿ.ರೇವಡಿಗಾರ, ವಿರುಪಾಕ್ಷ ಹಿರೇಮಠ, ಶಿವಾನಂದ ಬಿದರಿ, ಸುಬ್ಬರಾಯಗೌಡ ಪಾಟೀಲ, ಎಸ್.ಎನ್.ಮುತ್ತಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net