ಸರಗೂರಿನಲ್ಲಿ ಶ್ರೀಸಿದ್ದಪ್ಪಾಜಿ ಕಂಡಾಯ ಉತ್ಸವ

14-kgl-1,,,,,,
Published on

ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಕುರುಬನಕಟ್ಟೆಯ ಪವಾಡ ಪುರುಷ ಶ್ರೀಸಿದ್ದಪ್ಪಾಜಿ ಕಂಡಾಯ ಉತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಗ್ರಾಮಕ್ಕೆ ಗುರುವಾರ ಶ್ರೀಕುರುಬನಕಟ್ಟೆ ಕಂಡಾಯಗಳು ಆಗಮಿಸಿದ್ದವು. ಗ್ರಾಮದ ಹೊರ ವಲಯದಲ್ಲಿರುವ ಕಾವೇರಿ ನದಿಯಲ್ಲಿ ಕಂಡಾಯಗಳನ್ನು ಶುಚಿಗೊಳಿಸಿ ಹೂ, ಹೊಂಬಾಳೆ ಧರಿಸಿ ಶೃಂಗರಿಸಲಾಯಿತು. ನೀಲಗಾರರ ಸಂಪ್ರದಾಯದಂತೆ ಕಂಡಾಯಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ, ಮೆರವಣಿಗೆ ಮಾಡುವ ಮೂಲಕ ಕಂಡಾಯಗಳನ್ನು ಗ್ರಾಮದ ಪ್ರವೇಶ ಮಾಡಿಸಲಾಯಿತು. ಗ್ರಾಮದಲ್ಲಿರುವ ಶ್ರೀಸಿದ್ದಪ್ಪಾಜಿ ದೇವಾಲಯದಲ್ಲಿ ಕಂಡಾಯಗಳನ್ನು ಇರಿಸಲಾಗಿತ್ತು. ಶುಕ್ರವಾರ ಶ್ರದ್ಧಾಭಕ್ತಿಯಿಂದ ಕಂಡಾಯಗಳಿಗೆ ಗ್ರಾಮಸ್ಥರು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.

ಶನಿವಾರ ಬೆಳಗ್ಗೆ ಗ್ರಾಮದಲ್ಲಿ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಮನೆ ಮನೆಗಳ ಮುಂದೆ ಕಂಡಾಯಗಳಿಗೆ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಗ್ರಾಮದ ಯಜಮಾನರಾದ ಕೆಂಪಯ್ಯ, ರವಿ, ಜವರಯ್ಯ, ಸೋಮಣ್ಣ, ರಾಮು, ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net