

ಹನೂರು: ಎಲ್ಲ ವರ್ಗಕ್ಕೂ ಸಮಾನತೆ ತಂದು ಕೊಡುವ ಸಲುವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿರುವ ಸಂವಿಧಾನ ಶ್ರೇಷ್ಠವಾದುದು ಎಂದು ಮನೋರಖ್ಖಿತ ಬಂತೇಜಿ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭೀಮಸೇನಾ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ 75ನೇ ವರ್ಷದ ಸಂವಿಧಾನ ಸಮರ್ಪಿತಾ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇಶದ ಸಂವಿಧಾನವು ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರೃ, ಸಮಾನತೆ ಹಾಗೂ ಭಾತೃತ್ವದಡಿ ರಚಿತವಾಗಿದ್ದು, ಎಲ್ಲ ವರ್ಗಕ್ಕೂ ಸಮಾನ ಅವಕಾಶವನ್ನು ಕಲ್ಪಿಸಿದೆ. ಹಾಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಪೋಷಕ ತಂದೆ. ಬುದ್ಧ ಆಧ್ಯಾತ್ಮಿಕ ತಂದೆ. ಅಂಬೇಡ್ಕರ್ ಅವರು ಸಮಾಜದಲ್ಲಿದ್ದ ಅಸ್ಪಶ್ಯತೆ ಹಾಗೂ ಶೋಷಿತರ ಸಮಸ್ಯೆಗಳನ್ನು ಅಹಿಂಸಾ ಮಾರ್ಗದಿಂದ ಬಗೆಹರಿಸಿದ್ದಾರೆ. ದೇಶಕ್ಕೆ ಸಂವಿಧಾನವನ್ನು ಕೊಡುಗೆ ನೀಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸುವುದರ ಜತೆಗೆ ಆಶಯವನ್ನು ಅರಿಯುವಂತಾಗಬೇಕು ಎಂದರು.
ಜಿ.ವಿ.ಗೌಡ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಲಾಜರಸ್, ಭೀಮಸೇನಾ ಸಂಘದ ಅಧ್ಯಕ್ಷ ಎನ್.ರಮೇಶ್, ಉಪಾಧ್ಯಕ್ಷ ಪಶುಪತಿ, ಪ್ರಧಾನ ಕಾರ್ಯದರ್ಶಿ ನಂಜುಂಡಯ್ಯ, ಕಾರ್ಯದರ್ಶಿ ಕೆಂಚಪ್ಪ, ಸಹ ಕಾರ್ಯದರ್ಶಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾದ ಡಿ.ರಮೇಶ್, ಕೆ.ಎಂ ಮಧುಸೂದನ್, ಖಜಾಂಚಿ ಶಿವಕುಮಾರ್, ಮಹಿಳಾ ಘಟಕದ ಪದಾಧಿಕಾರಿಗಳಾದ ಶಿವಮ್ಮ, ರೂಪಶ್ರೀ, ಸಾವಿತ್ರಿ, ಲಲಿತಾ, ಮಹದೇವಮ್ಮ, ಸುಧಾಮಣಿ, ಉಮಾದೇವಿ ಮತ್ತಿತರರು ಹಾಜರಿದ್ದರು.