ಸಮಾನತೆ ನೀಡಿದ ಸಂವಿಧಾನ

MLA NEWS
Published on

ನುಗ್ಗೇಹಳ್ಳಿ: ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಗಳಿಂದ ದೇಶದ ಅಭಿವೃದ್ಧಿಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಕಗ್ಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ದೇಶದ ಎಲ್ಲರಿಗೂ ಸಮಾನತೆ, ವ್ಯಕ್ತಿ ಗೌರವ, ದೇಶದ ಏಕತೆಗೆ ಭ್ರಾತೃತ್ವ ಭಾವನೆ ಮೂಡಿಸಲು ಸಹಕಾರಿಯಾಗಿದೆ ಎಂದರು.

ತೋಟಿ ನೀರಾವರಿ ಯೋಜನೆಯ ಉಳಿದ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಹಂಗಾಮಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಫೂರ್ತಿ ವಿಜಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ತ್ಯಾಗರಾಜು, ಹರೀಶ್, ವಜ್ರ ಕುಮಾರ್, ಮುಖಂಡರಾದ ನಾಗೇಂದ್ರ ಬಾಬು, ರಾಧಾಮಣಿ, ಬೆಳಗಳ್ಳಿ ಪುಟ್ಟಸ್ವಾಮಿ, ಸಂಪತ್ ಕುಮಾರ್, ಅಶೋಕ್, ರಂಗಸ್ವಾಮಿ, ಕೃಷ್ಣೇಗೌಡ, ಪ್ರದೀಪ್, ಸುರೇಶ್, ಉಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net