

ಬಾಗಲಕೋಟೆ: ಸಮಾಜದ ಉತ್ತಮ ಬೆಳವಣಿಗಾಗಿ ಸಂಘ ಸಂಸ್ಥೆಗಳ ಕಾರ್ಯ ಅತೀ ಮುಖ್ಯವಾಗಿರುತ್ತದೆ ಎಂದು ತೋವಿವಿಯ ಪ್ರಭಾರ ಕುಲಪತಿ ಹಾಗೂ ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ ಹೇಳಿದರು.
ತೋವಿವಿಯ ಶಿಕ್ಷಕೇತರ ನೌಕರರ ಸಂಘದಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಮತ್ತು ಸರ್ವಸಾಧಾರಣಾ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ, ಆರೋಗ್ಯವಂತ ನಿರ್ಮಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಬಡವರ ಬಗ್ಗೆ ಕಾಳಜಿ ವಹಿಸಬೇಕು. ಹಿರಿಯರನ್ನು ಗೌರವಿಸುವ ಕೆಲಸವಾಗಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡುವುದರ ಮುಖಾಂತರ ತಮ್ಮ ತಂದೆ ತಾಯಿಗಳಿಗೆ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡೀನ್ ಡಾ.ರಾಮಚಂದ್ರ ನಾಯ್ಕ, ಡೀನ್ ಸ್ನಾತಕೋತ್ತರ ಡಾ.ಲಕ್ಷಿನಾರಾಯಣ ಹೆಗಡೆ, ಆಸ್ತಿ ಅಧಿಕಾರಿಗಳು ಬಿ.ವೈ.ಭಜಂತ್ರಿ, ಆಡಳಿತಾಧಿಕಾರಿ ರವೀಂದ್ರ ವೈ. ಕಾಂಬಳೆ, ಡೀನ್ ಡಾ.ಬಾಲಾಜಿ ಕುಲಕರ್ಣಿ ಶಿಕ್ಷಕೇತರ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಗಂಗಪ್ಪ ಎಸ್. ಬಳ್ಳೋಡಿ, ಪ್ರಕಾಶ ಎನ್. ಗೌಡರ, ಬಸಪ್ಪ ಐ.ಅಂಗಡಿ, ಬಸಗೌಡ ಪಾಟೀಲ, ಬಾವಾಸಾಬ ಬಿ. ಮಕಾನದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.