ಸಮಾಜ ಘಾತುಕ ಶಕ್ತಿಗಳ ಬಗ್ಗೆ ಎಚ್ಚರ ಇರಲಿ

bkt-22-2
ಸಂಕ್ರಾಂತಿ ಉತ್ಸವ ಅಂಗವಾಗಿ ಬಾಗಲಕೋಟೆ ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಭಾನುವಾರ ಸಂಜೆ ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟೆ ವಿಭಾಗ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ವಿಜಯನಗರದ ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ ಮಾತನಾಡಿದರು. ಪ್ರಾಚಾರ್ಯ ಡಾ.ಸುಷ್ಮಾದೇವಿ ಒಡೆಯರ, ವಿಭಾಗ ಪಾಲಕ ಅಽಕಾರಿ ಸುಧಾ ದೇಸಾಯಿ ಇದ್ದರು.
Published on

ಬಾಗಲಕೋಟೆ: ನಮ್ಮ ಮಕ್ಕಳಿಗೆ ಕಲೆ, ಸಂಸ್ಕೃತಿ, ಧರ್ಮ ಪಾಲನೆ, ಅನುಷ್ಠಾನ, ಪದ್ಧತಿ ಚಿಕ್ಕವರಿದ್ದಾಗಲೇ ಕಲಿಸಿಕೊಡಬೇಕು. ಶಾಲಾ ಶಿಕ್ಷಣದ ಜೊತೆಗೆ ಸಂಸ್ಕಾರ ಹೇಳಿಕೊಡಬೇಕು. ಇಲ್ಲವಾದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಕುಟುಂಬ, ಸಮುದಾಯ ಸಿಲುಕುತ್ತದೆ. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಸದಾ ಇರಬೇಕು ಎಂದು ವಿಜಯನಗರದ ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ ಹೇಳಿದರು.
ಸಂಕ್ರಾಂತಿ ಉತ್ಸವ ಅಂಗವಾಗಿ ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಭಾನುವಾರ ಸಂಜೆ ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟೆ ವಿಭಾಗ ಹಮ್ಮಿಕೊಂಡಿದ್ದ ಪಥ ಸಂಚಲನ ಬಳಿಕ ಬಹಿರಂಗ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಮಕ್ಕಳು ನಮ್ಮ ಧರ್ಮ ಬಿಟ್ಟು ಬೇರೆ ಧರ್ಮ ಸ್ವೀಕರಿಸುತ್ತಿದ್ದಾರೆ ಎಂದರೇ ಅದು ನಮ್ಮ ಧರ್ಮ ವೈಫಲ್ಯತೆ ಅಲ್ಲ. ನಾವು ಅವರಿಗೆ ನಮ್ಮ ಧರ್ಮದ ಶ್ರೇಷ್ಠತೆ ಪಾಠ ಮಾಡಿಲ್ಲ. ಸಂಸ್ಕಾರ, ಸಂಸ್ಕೃತಿ ಕಲಿಸಿಲ್ಲ. ನಮ್ಮ ದೇವರುಗಳ ಮಹತ್ವ ಅರಿತುಕೊಳ್ಳುವಂತೆ ಮಾಡಬೇಕು. ಸಮಾಜಕ್ಕೆ ಆಪತ್ತು ಎದುರಾಗದಂತೆ ತಡೆಗಟ್ಟಬೇಕು. ಬದ್ಧತೆ ಪ್ರದರ್ಶಿಸಬೇಕು ಎಂದರು.
ಮಹಿಳಾ ಪಥ ಸಂಚಲನ ಇತಿಹಾಸದಲ್ಲಿ ಬರೆದಿಟ್ಟುಕೊಳ್ಳುವ ಕಾರ್ಯಕ್ರಮ. ಮುಂದಿನ ವರ್ಷಗಳಲ್ಲಿ ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಪಥ ಸಂಚಲನ ನಡೆಸಬೇಕು. ಸಂಕ್ರಾಂತಿ ಹಬ್ಬ ಹಲವು ವೈಶಿಷ್ಠತೆ ಹೊಂದಿದೆ. ನಮ್ಮ ಜೀವನ ಕ್ರಮ ಪರಂಪರಗಾತವಾಗಿ ಬಂದಿರುವ ಹಬ್ಬಗಳ ಜೊತೆ ಅವಿತುಕೊಂಡಿದೆ. ಪಾಕೃತಿಕ ಪಾಠ ಕಲಿಸುತ್ತದೆ. ಹಬ್ಬಗಳ ಆಚರಣೆ ಕುರಿತು ಹೇಳಿಕೊಡಬೇಕು. ಲವ್ ಜಿಹಾದ್‌ಗೆ ಒಳಗಾಗದಂತೆ ದೇವರು, ಧರ್ಮದ ಶ್ರೇಷ್ಠತೆ ಕುರಿತು ತಿಳಿ ಹೇಳಬೇಕು. ನಮ್ಮ ತನ ಕಳುಹಿಸಿಕೊಡಬೇಕು. ಕೆಲವು ಧರ್ಮದವರು ಏಕ ದೇವರ ಉಪಾಸನೆ ಹೇಳುತ್ತಾರೆ. ನಮ್ಮ ಬಹುತ್ವ ದೇವರ ಬಗ್ಗೆ ಮಕ್ಕಳಿಗೆ ಪರಿಚಯಿಸಬೇಕು ಎಂದು ತಿಳಿಸಿದರು.
ಬಿವಿವಿ ಸಂಘದ ಅಕ್ಕ ಮಹಾದೇವಿ ಮಹಿಳಾ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಷ್ಮಾದೇವಿ ಒಡೆಯರ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಪಾಲಕ ಅಧಿಕಾರಿ ಸುಧಾ ದೇಸಾಯಿ, ಜಿಲ್ಲಾ ಕಾರ್ಯವಾಹಿಕಾ ಸಂಧ್ಯಾ ಕುಲಕರ್ಣಿ, ಭುವನೇಶ್ವರಿ ಕೊರವಾರ ಉಪಸ್ಥಿತರಿವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net