ಸಮಸ್ಯೆ ಅವಲೋಕಿಸಿದ ಬಸ್ ನಿಯಂತ್ರಣಾಧಿಕಾರಿ

06sunti01
Published on

ಸುಂಟಿಕೊಪ್ಪ: ಕುಶಾಲನಗರ ಬಸ್ ನಿಯಂತ್ರಣಾಧಿಕಾರಿ ಅಶೋಕ್ ಅವರನ್ನು ವಾಸ್ತವ ಪರಿಸ್ಥಿತಿ ತಿಳಿದುಕೊಳ್ಳಲು ಸುಂಟಿಕೊಪ್ಪದಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ಮಡಿಕೇರಿ ಡಿಪೋ ವ್ಯವಸ್ಥಾಪಕರು ಬಸ್ ಪ್ರಯಾಣಿಕರ ಸಮಸ್ಯೆ ಗಂಭೀರತೆಯ ಮಾಹಿತಿ ಸಂಗ್ರಹಿಸಿದರು.

‘ವಿದ್ಯಾರ್ಥಿಗಳಿಗೆ ಬಸ್ ಕೊರತೆ’ ಕುರಿತು ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿದ್ದ ಹಿನ್ನೆಲೆಯಲ್ಲಿ ಮಡಿಕೇರಿ ಡಿಪೋ ವ್ಯವಸ್ಥಾಪಕರು ಈ ಕ್ರಮ ಕೈಗೊಂಡಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳ ಭವಿಷ್ಯವನ್ನು ರೂಪಿಸಲು ಮಕ್ಕಳನ್ನು ಪ್ರತಿಷ್ಠಿತ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಸಾವಿರಾರು ರೂ. ಶುಲ್ಕ ಪಾವತಿಸಿ ಮಡಿಕೇರಿ ಮತ್ತು ಕುಶಾಲನಗರ ಶಾಲಾ-ಕಾಲೇಜುಗಳಿಗೆ ಸೇರಿಸಲಾಗಿದೆ.

ಆದರೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಸಂಚರಿಸುವ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವ ಎಲ್ಲ ಬಸ್‌ಗಳಲ್ಲಿ 2 ಬಸ್ಸಿನ ಪ್ರಯಾಣಿಕರು ಒಂದೇ ಬಸ್ಸಿನಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಸಂಚರಿಸುತ್ತಾರೆ. ಸುಂಟಿಕೊಪ್ಪದಲ್ಲಿ ಬಸ್ ನಿಲುಗಡೆ ಬಸ್ಸಿನಲ್ಲಿ ನಿಂತು ಪ್ರಯಾಣಿಸುವುದು ಕಷ್ಟಸಾಧ್ಯವಾಗುತ್ತಿದೆ. ಮಡಿಕೇರಿ ಭಾಗಕ್ಕೆ ತೆರಳುವ ಕಾಲೇಜುಗಳಿಗೆ 10 ಗಂಟೆಯವರೆಗೂ ಬಸ್ ದೊರೆಯದೆ ವಾರದ 3-4 ದಿನಗಳು ಪಾಠ ಪ್ರವಚನ ಕಳೆದುಕೊಳ್ಳುತ್ತಿದ್ದಾರೆ.

ಬುಧವಾರ ಸುಂಟಿಕೊಪ್ಪ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆಯಿಂದ 10.30 ಗಂಟೆಯವರೆಗೆ ಕುಶಾಲನಗರ ಬಸ್ ನಿಯಂತ್ರಕ ಅಶೋಕ್ ಸುಂಟಿಕೊಪ್ಪ ಮಾರ್ಗವಾಗಿ ಅಂದಾಜು ಸುಮಾರು 40ಕ್ಕೂ ಹೆಚ್ಚು ರಾಜ್ಯ ಸಾರಿಗೆ ಸಂಸ್ಥೆಯ ಹೊರ ಜಿಲ್ಲೆಯ ಬಸ್‌ಗಳು ಸಂಚರಿಸುತ್ತಿದ್ದು ಕುಶಾಲನಗರದಿಂದ ಮಡಿಕೇರಿ ಭಾಗಕ್ಕೆ ಆಗಮಿಸುವ ಹಾಸನ ಹಾಗೂ ಭಾಗದ ಬಸ್ಸುಗಳೆಲ್ಲವೂ ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿರುವುದನ್ನು ಜಿಪಿಎಸ್ ಚಿತ್ರಗಳನ್ನು ತೆಗೆದು ತಮ್ಮ ಮೇಲಧಿಕಾರಿಗಳಿಗೆ ಕಳುಹಿಸಿದ್ದು 10.30 ರವರೆಗೂ ಸಂಚರಿಸಿದ ಎಲ್ಲ ಪ್ರಯಾಣಿಕರಿಂದ ಕಿಕ್ಕಿರಿದ್ದು ತುಂಬಿಕೊಂಡಿರುವುದು ದೃಶ್ಯಗಳು ಕಂಡುಬಂದವು.

ಸಮಸ್ಯೆಯ ಗಂಭೀರತೆಯನ್ನು ಬಸ್ ನಿಯಂತ್ರಕ ಅಶೋಕ್ ಅರಿತಿದ್ದು, ತಕ್ಷಣವೇ ನಿವಾರಿಸಲು ಮುಂದಾಗಬೇಕೆಂದು ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ ಶರೀಫ್ ಒತ್ತಾಯಿಸಿದರು.

ಮಡಿಕೇರಿ ಡಿಪೋ ವ್ಯವಸ್ಥಾಪಕರು ಹಾಗೂ ಶಾಸಕರು ಸಮಸ್ಯೆಯ ಗಂಭೀರತೆ ಮನಗಂಡಿದ್ದು ಮುಂದಿನ ದಿನಗಳಲ್ಲಿ ಸುಂಟಿಕೊಪ್ಪ ಮಡಿಕೇರಿ ಮತ್ತು ಸುಂಟಿಕೊಪ್ಪದಿಂದ ಕುಶಾಲನಗರ ಮಾರ್ಗಕ್ಕೆ ಅತೀ ಹೆಚ್ಚಿನ ಬಸ್ ಸೇವೆಯನ್ನು ಆರಂಭಿಸುವ ಮೂಲಕ ಮಕ್ಕಳ ಮುಂದಿನ ದಿಸೆಯಲ್ಲಿ ಕ್ರಮ ಕೈಗೊಳ್ಳಲ್ಲಿ ಎಸ್‌ಡಿಟಿಯು ಜಿಲ್ಲಾಧ್ಯಕ್ಷ ಶರೀಫ್(ಅಣ್ಣಾ) ಮನವಿ ಮಾಡಿದರು.

ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿರುವ ಎಲ್ಲ ಬಸ್ಸುಗಳ ಜಿಪಿಎಸ್ ಚಿತ್ರಗಳನ್ನು ತೆಗೆದು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಮುಂದಿನ ಕ್ರಮವನ್ನು ಅವರು ಕೈಗೊಳ್ಳಲಿದ್ದಾರೆ.

ಅಶೋಕ್, ಕುಶಾಲನಗರ ಬಸ್ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net