ಸಮರ್ಪಣೆ, ಶಿಸ್ತು ನಿರ್ಣಯವೇ ಯಶಸ್ಸಿನ ಕೀಲಿಕೈ

cad7a363-466b-448e-8f5f-990ccad89c01
Published on

ಬಾಗಲಕೋಟೆ: ಪ್ರತಿಯೊಬ್ಬರು ಸಮರ್ಪಣೆ ಶಿಸ್ತು ಮತ್ತು ನಿರ್ಣಯವನ್ನು ಸಮರ್ಪಕವಾಗಿ ಬಳಸಿದ್ದೆ ಆದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಡಾ. ಸಂತೋಷ್ ಎಂ ಬೆಳವಾಡಿ ಹೇಳಿದರು.

ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2023 24 ನೇ ಸಾಲಿನ ಬಿಎಎಂಎಸ್ ವಿದ್ಯಾರ್ಥಿಗಳಿಗಾಗಿನ ಪರಿವರ್ತನಾ ಪಠ್ಯಕ್ರಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗಿಯಾಗಿದ್ದ ಗದಗ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ್ ಎನ್ ಬೆಳವಾಡಿ ಮಾತನಾಡುತ್ತಾ ಬದುಕಿನಂತೆ ಆಯುರ್ವೇದದ ನೀವು ಸಹ ಸಮರ್ಪಣೆ, ಶಿಸ್ತು ಮತ್ತು ನಿರ್ಣಯವನ್ನು ಬಳಸಿಕೊಂಡಿದ್ದೆ ಆದರೆ ಯಶಸ್ಸು ಸುಗಮವಾಗುತ್ತದೆ ಎಂದರು.

ಇನ್ನೋರ್ವ ಮುಖ್ಯ ಭಾಷಣಕಾರರಾಗಿದ್ದ ವರೂರಿನ ಎಜಿಎಂ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸೈಯದ್ ಇರ್ಫಾನ್ ಖಾದ್ರಿ ಅವರು ಬಿಎಎಂಎಸ್‌ನ ಮೂಲಭೂತ ಅಂಶಗಳನ್ನು ತಿಳಿಸಿಕೊಟ್ಟರು.

11 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ನಗರದ ಪ್ರಸಿದ್ಧ ವೈದ್ಯರಾದ ಡಾ. ಎಚ್ ಆರ್ ಕಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲೆಯ ಶಹಪುರದ ಶ್ರೀ ಬಿ ಎಂ ಕನಕವಾಡಿ ಆಯುರ್ವೇದಿಕ್ ಕಾಲೇಜಿನ ಡಾ. ಸುಹಾಸ್ ಶೆಟ್ಟಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಆದ ಡಾ. ಶಿವಕುಮಾರ್ ಗಂಗಾಲ, ಪ್ರಾಂಶುಪಾಲರಾದ ಡಾ. ಪ್ರಲ್ಹಾದ ಗಂಗಾವತಿ, ಜೊತೆಗೆ ಕಾಲೇಜಿನ ಎಲ್ಲ ಪ್ರಾಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net