

ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿAದ ಕುಡಿಯುವ ನೀರಿನ ಸಮಸ್ಯೆಯಾಗಿದ್ದು , ನೀರು ಸರಬರಾಜು ಮಾಡದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ನಗರಸಭೆ ಆಯುಕ್ತ ಆರ್.ವಾಸಣ್ಣ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಿದ್ಯಾಗಿರಿ ಬಡಾವಣೆಯ ಸಾರ್ವಜನಿಕರು, ನಗರಸಭೆ ಸದಸ್ಯರು ಸೇರಿ ನಗರಸಭೆಯ ಆಯಕ್ತರಿಗೆ ಭೇಟಿ ಮಾಡಿ, ಬಡಾವಣೆಗಳಲ್ಲಿ ಪ್ರತಿ ದಿನ ನೀರು ಬಿಡುವಂತೆ ಒತ್ತಾಯಿಸಿ ಮನವಿ ನೀಡಿದರು. ನಗರಸಭೆ ಸದಸ್ಯ ವೀರಣ್ಣ ಶಿರಗಣ್ಣವರ ಮಾತನಾಡಿ, ವಾರ್ಡ ನಂ ೧೯ ರಲ್ಲಿ ಬರುವ ಜೋತಿ ಕಾಲೋನಿ, ಕುದರಿಕನ್ನೂರ ಲೇಔಟ್, ತೆಗ್ಗಿ ಲೇಔಟ್, ರೂಪಲ್ಯಾಂಡ, ತೋಸನಿವಾಲ ಲೇಔಟ್, ಕೆ.ಎಸ್.ಬಿ. ಕಾಲೋ ನಿ, ಗುರುಬಸವ ಕಾಲೋನಿ ಗಳಲ್ಲಿ ಕಳೆದ ಮೂರು ತಿಂಗಳಿ0ದ ನೀರು ಬರದ ಕಾರಣ ಹಾಗೂ ಬೇಸಿಗೆಯ ಅವಽಯಲ್ಲಿ ಬೋರವೆಲ್ಲನಲ್ಲಿ ನೀರು ಕಡಿಮೆಯಾಗಿದ್ದು, ನೀರು ಸರಬರಾಜು ಮಾಡುವಲ್ಲಿ ನಗರಸಭೆ ವಿಫಲವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಿ.ವಿ.ಶಿರಗನ್ನವರ ಮಾತನಾಡಿ, ಈಗಾಗಲೇ ಹಲವು ಬಾರಿ ನಗರಸಭೆ ಸದಸ್ಯರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ವಾರ್ಡ ನಂ.೩೨.೩೩.೩೪.೩೫ ರಲ್ಲಿಯೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಉಲ್ಬವಿಸಲಿದ್ದು, ವಿದ್ಯಾಗಿರಿ ಎಲ್ಲಾ ನಗರಸಭೆ ಸದಸ್ಯರ ಸಮ್ಮುಖದಲ್ಲಿ ನಗರಸಭೆ ಅಽಕಾರಿಗಳ ಗಮನಕ್ಕೆ ತರಲಾಗಿದೆ. ಮುಂಬರುವ ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಸಭಾಪತಿ ಯಲ್ಲಪ್ಪ ನಾರಾಯಣಿ, ಹನಮಂತ ತೆಗ್ಗಿ, ಚೌಡಾಪುರ, ಕಿರಣಸಿಂಗ ಗಲಗಲಿ, ಉಮೇಶ ಹಂಚಿನಾಳ, ಸಂಗಣ್ಣ ಕುಪ್ಪಸ್ತ, ಶ್ರೀಧರ ನಾಗರಬೆಟ್ಟ, ವಿರೇಶ ಹಡಪದ, ನಿಂಗಪ್ಪ ಕೊಡ್ಲೆಪ್ಪನವರ್, ಆನಂದ ಗಚ್ಚನೂರ, ದ್ಯಾಮಣ್ಣ ಜಲಗೇರಿ, ಡಾ.ಜಿ.ಜಿ.ಕುಲಕರ್ಣಿ, ವಿಜಯ ವಾಲಿ, ಎಸ್.ವಿ.ಹೊಸಗೌಡರ, ಸುರೇಶ ಹಿರೇಮಠ ಸೇರಿದಂತೆ ಇತರರು ಇದ್ದರು.