

ಕಲಬುರಗಿ: ಜಿಲ್ಲೆಗೆ ಈ ಬಾರಿ ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ಬಂದಿದ್ದು, ಅದರಲ್ಲೂ ವಿಶೇಷವಾಗಿ ಆಳಂದ ತಾಲೂಕಿಗೆ ಅತಿ ಹೆಚ್ಚು ೮೨.೮೮ ಕೋಟಿ ರೂ. ಪರಿಹಾರ ಬಂದಿದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದರು.
ಜಿಲ್ಲೆಗೆ ೧೮೫ ಕೋಟಿ ರೂ. ಬೆಳೆ ವಿಮೆ ಪರಿಹಾರ ಬಂದಿದೆ. ಅದಾನಿ ಕಂಪನಿಯಾದ ಯುನಿವರ್ಸಲï ಸೋಂಪೊ ಗೋಲ್‌ಮಾಲï ಮಾಡಿ ರೈತರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ವಿಫಲವಾಗಿತ್ತು. ಆಳಂದ ಮತ್ತು ಕಲಬುರಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಮಗ್ರ ಚರ್ಚೆ ಮಾಡಿದ ನಂತರ ಬೆಳೆ ವಿಮೆ ಕಂಪನಿ ಬದಲಾವಣೆಯಾಗಿ ಕೇಂದ್ರ ಸರ್ಕಾರ ವ್ಯಾಪ್ತಿಯ ಇಫ್ಕೊ ಕಂಪನಿ ಬಂದಿದೆ. ಹೀಗಾಗಿ ಫಲಾನುಭವಿ ರೈತರಿಗೆ ನ್ಯಾಯ ಸಿಕ್ಕಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ದು, ಹೆಸರು, ಸೋಯಾಬೀನ್, ಸೂರ್ಯಕಾಂತಿ ಬೆಳೆಗೆ ಪರಿಹಾರ ಬಂದಿಲ್ಲ. ರೈತರು ವಿಮೆ ಪ್ರಿಮಿಯಂ ಭರಿಸಿದ್ದರೂ ಯಾಕೆ ಬಂದಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಈ ಕುರಿತು ಜಿ¯್ಲÁಧಿಕಾರಿಗಳು, ಕಂಪನಿಯೊAದಿಗೆ ಚರ್ಚಿಸಬೇಕು. ಆಳಂದ ತಾಲೂಕಿನ ಹೊದಲೂರ ಮತ್ತು ಖಜೂರಿ ಗ್ರಾಮದ ರೈತರಿಗೆ ಬೆಳೆ ವಿಮೆ ಪರಿಹಾರ ಇನ್ನೂ ಬಂದಿಲ್ಲ. ಈ ಕುರಿತು ಗ್ರಾಹಕರ ನ್ಯಾಯಾಲಯಕ್ಕೆ ಹೋಗುವಂತೆ ರೈತರಿಗೆ ಸಲಹೆ ನೀಡಲಾಗಿದೆ. ಅಧಿಕಾರಿಗಳು ಬೆಳೆ ಕಟಾವ್ ವರದಿ ನೀಡಿಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಜಿ¯್ಲÁಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಬೇಕು ಎಂದು ಹೇಳಿದರು.
ಪೆಟ್ರೋಲï, ಡೀಸೆಲï ದರ ಏರಿಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಕೇಂದ್ರ ಸರ್ಕಾರ ಕಾಲ- ಕಾಲಕ್ಕೆ ದರ ಏರಿಕೆ ಮಾಡುತ್ತಿದೆ. ರಾಜ್ಯದಲ್ಲಿ ವಸೂಲಿ ಮಾಡುವ ಜಿಎಸ್‌ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯದ ಪಾಲು ಸಮರ್ಪಕವಾಗಿ ನೀಡುತ್ತಿಲ್ಲ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆಯಾದಾಗ ಚರ್ಚೆಯಾಗುವುದಿಲ್ಲ. ಆದರೆ ರಾಜ್ಯ ಸರ್ಕಾರ ಏರಿಕೆ ಮಾಡಿದರೆ ಚರ್ಚೆ ಜೋರಾಗಿ ನಡೆಯುತ್ತದೆ ಎಂದು ಕಿಡಿಕಾರಿದರು.
ಪ್ರಮುಖರಾದ ಗುರುಲಿಂಗ ಜಂಗಮ ಪಾಟೀಲï, ಬಸವರಾಜ ಉಪ್ಪಿನ್, ಧರ್ಮರಾಜ ಸಾಹು, ಚನ್ನಮಲ್ಲಯ್ಯ ಪಾಟೀಲ್ ಇತರರಿದ್ದರು.