

ಬಾಗಲಕೋಟೆ: ಸಲಿಂಗಿಗಳ ವೈವಾಹಿಕ ಜೀವನಕ್ಕೆ ಮುದ್ರೆ ಒತ್ತುವ ಮುನ್ನ ಕೇಂದ್ರ ಹಾಗೂ ಸುಪ್ರೀಂ ಕೋರ್ಟ ಹಿಂದೂ ಸಮಾಜದ ವಿದ್ವಾಂಸರು, ಧರ್ಮಶಾಸö ತಜ್ಞರೊಂದಿಗೆ ವಿಚಾರ, ವಿಮರ್ಶೆ ಮಾಡಿ ಮುಂದಿನ ಕ್ರಮಕೈಗೊಳ್ಳಬೇಕು. ಭಾರತದಲ್ಲಿ ವೈವಾಹಿಕ ಜೀವನದ ಪಾವಿತ್ರ‍್ಯತೆ ಇದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನವನಗರದ ಸೆಕ್ಟರ್ ನಂಬರ್ ೮ ರಲ್ಲಿ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲಿಂಗಿಗಳು ವಿವಾಹಕ್ಕೆ ಅನುಮತಿ ಕೋರಿz್ದÁರೆ. ಅದಕ್ಕೆ ವೈವಾಹಿಕ ಜೀವನಕ್ಕೆ ಸಮ್ಮತಿ ನೀಡುವುದು ಸಲ್ಲ ಎಂಬುದು ನಮ್ಮ ಅಭಿಪ್ರಾಯ. ವೈವಾಹಿಕ ಜೀವನಕ್ಕೆ ಭಾವನಾತ್ಮಕ, ಶಾಸöಕ್ಕೆ ಸಂಬಂಽಸಿದ ವಿಚಾರಗಳ ಬಗ್ಗೆ ನೇರವಾಗಿ ಕ್ರಮಕೈಗೊಳ್ಳಬಾರದು ಎಂದರು.
ಸುಪ್ರೀಂ ಕೋರ್ಟ್ಗೆ ಘನತೆ ಇದೆ. ಅದರ ತೀರ್ಪನ್ನು ಒಪ್ಪುತ್ತೇವೆ. ರಾಜಪ್ರಭುತ್ವ ನಮ್ಮಲ್ಲಿಲ್ಲ. ಅಡ್ಡಬಾಗಿಲು ಮೂಲಕ ನಿರ್ಧಾರವಾದದ್ದು ಎಂಬ ಭಾವನೆ ಬರಬಾರದು. ರಾಜಪ್ರಭುತ್ವದ ಇನ್ನೊಂದು ಮುಖ ಆಗಬಾರದು. ಈ ಬಗ್ಗೆ ಎಲ್ಲ ರೀತಿಯ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ದಂಗೆ-ಹೋರಾಟ ಮಾಡಿದವರಿಗೆ ಮೀಸಲಾತಿ?
ಆರ್ಥಿಕ ಹಿಂದುಳಿದವರಿಗೆ ಕೇಂದ್ರ ನಿಗದಿಪಡಿಸಿರುವ ಶೇ ೧೦ರಷ್ಟು ರಾಜ್ಯದಲ್ಲಿ ಜಾರಿಗೊಳಿಸಿಲ್ಲ. ಏನು ಸಮಸ್ಯೆ ಆಗಿದೆ ಅಂತ ಜನರ ಮುಂದೆ ಇಡಬೇಕು. ಬೀದಿಗಳಲ್ಲಿ ನಿಂತು ಹೋರಾಟ, ದಂಗೆ ಮಾಡಿದರೇ ಮಾತ್ರ ಸೌಲಭ್ಯ ಎನ್ನುವಂತಾಗಬಾರದು. ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಮುಂದೆ ಬರುವ ಸರ್ಕಾರ ಆದ್ಯತೆ ಮೇಲೆ ಈ ವಿಷಯ ಎತ್ತಿಕೊಳ್ಳಬೇಕು ಎಂದು ಹೇಳಿದರು.
ಶೇ.೧೦ರಷ್ಟು ಮೀಸಲಾತಿಯಲ್ಲಿ ಶೇ.೪ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ಈಗಿರುವುದನ್ನು ಜಾರಿಗೊಳಿಸಿ ಅವರಿಗೆ ನ್ಯಾಯ ಒದಗಿಸಬೇಕು. ಅದನ್ನು ಮತ್ತಷ್ಟು ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು.