

ಬಾಗಲಕೋಟೆ: ಬಿ.ವಿ.ವಿ.ಸಂಘ ಹಾಗೂ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆದಿಂದ ಹಮ್ಮಿಕೊಂಡ ದಕ್ಷಿಣ ಭಾರತದ ಖೇಲೋ ಇಂಡಿಯಾ ವುಶು ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟ ಗುರುವಾರ ತೆರೆ.
ಸಮಗ್ರ ವಿಭಾಗದಲ್ಲಿ ತಮಿಳನಾಡು ೧೬ ಚಿನ್ನ, ೧೦ಬೆಳ್ಳಿ,೧೩ ಕಂಚು ಗಳೊಂದಿಗೆ ಕ್ರೀಡಾಕೂಟದಲ್ಲಿ ೧೨೩ ಅಂಕಗಳನ್ನು ಪಡೆದು ಸಮಗ್ರ ವೀರಾಗ್ರಣಿಯನ್ನು ಮುಡಿಗೇರಿಸಿಕೊಂಡಿತು, ೧೧ ಚಿನ್ನ,೧೬ ಬೆಳ್ಳಿ,೧೭ ಕಂಚು ಪದಗಳನ್ನು ಪಡೆದು ೧೨೦ ಅಂಕಗಳನ್ನು ಪಡೆದ ಕೇರಳ ೨ನೇಸ್ಥಾನ ಪಡೆಯಿತು, ಓಡಿಸ್ಸಾ ೮ಚಿನ್ನ, ೩ಬೆಳ್ಳಿ, ೮ಕಂಚಿನ ಪದಕ ಪಡೆದು ೫೭ ಅಂಕಗಳಿಂದ ತೃತೀಯಸ್ಥಾನ ಗಿಟ್ಟಿಸಿದರೆ, ಕರ್ನಾಟಕ ೬ಚಿನ್ನ, ೮ಬೆಳ್ಳಿ,೩೪ ಕಂಚು ಪಡೆದು ೮೮ ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನ, ಇನ್ನು ತೆಲಂಗಾಣ ೩ ಚಿನ್ನ,೩ ಬೆಳ್ಳಿ, ೧೫ಕಂಚು ಪಡೆದು ೩೯ ಅಂಕಗಳಿಂದ ೫ನೇಸ್ಥಾನ, ೧ಚಿನ್ನ,೪ ಬೆಳ್ಳಿ, ೩ಕಂಚು ಪಡೆದು ೨೦ ಅಂಕಗಳಿಂದ ಆಂದ್ರಪದೇಶ ೫ನೇ ಸ್ಥಾನದಲ್ಲಿ ಸಮಾದಾನಗೊಂಡಿತು,
ಇನ್ನು ಸಾಂಡಾ ವಿಭಾಗದಲ್ಲಿ : ಕೇರಳ ಪ್ರಥಮ, ಕರ್ನಾಟಕ ದ್ವೀತಿಯ, ಓಡಿಸ್ಸಾ ತೃತಿಯ. ಕೇರಳ ೬ಚಿನ್ನ, ೯ಬೆಳ್ಳಿ, ೧೧ ಕಂಚು ಪಡೆದು ೬೮ ಅಂಕಗಳಿಂದ ಪ್ರಥಮಸ್ಥಾನ ಪಡೆದರೆ, ಕರ್ನಾಟಕ೫ ಚಿನ್ನ, ೧ಬೆಳ್ಳಿ, ೧೫ ಕಂಚು ಪಡೆದು ೪೩ ಅಂಕಗಳಿಂದ ಏರಡನೇಸ್ಥಾನ ಪಡೆಯಿತು, ೬ಚಿನ್ನ, ೩ಕಂಚು ಪಡೆದು ೩೩ ಅಂಕಗಳಿಂದ ಓಡಿಸ್ಸಾ ೩ನೇಸ್ಥಾನ, ತಮಿಳನಾಡು ೨ ಚಿನ್ನ,೬ ಬೆಳ್ಳಿ,೪ ಕಂಚು ಪಡೆದು ೩೨ಅಂಕದಿಂದ ೪ನೇಸ್ಥಾನ, ಆಂದ್ರ ಪ್ರದೇಶ ೧ಚಿನ್ನ, ೩ಬೆಳ್ಳಿ, ೩ಕಂಚು ಪಡೆದು, ೧೭ ಅಂಕಗಳಿಂದ ೫ನೇಸ್ಥಾನ, ತೆಲಂಗಾಣ ೧ ಚಿನ್ನ, ೧ಬೆಳ್ಳಿ, ೬ಕಂಚು ಪಡೆದು ೧೪ ಅಂಕಗಳಿಂದ ೫ನೇಸ್ಥಾನ ಪಡೆಯಿತು.
ತಾವೂಲ್ ವಿಭಾಗದಲ್ಲಿ : ತಮಿಳನಾಡು ಪ್ರಥಮ, ಕೇರಳ ದ್ವಿತೀಯ, ಕರ್ನಾಟಕ ತೃತಿಯ. ತಮಿಳನಾಡು ೧೪ ಚಿನ್ನ,೪ಬೆಳ್ಳಿ, ೯ಕಂಚು ಪಡೆದು ೯೧ ಅಂಗಳಿಂದ ಪ್ರಥಮಸ್ಥಾನ, ಕೇರಳ ೫ಚಿನ್ನ, ೭ಬೆಳ್ಳಿ, ೬ಕಂಚು ಪಡೆದು ೫೨ಅಂಕಗಳಿAದ ದ್ವಿತೀಯ ಸ್ಥಾನ, ಕರ್ನಾಟಕ ೭ಬೆಳ್ಳಿ, ೧೮ಕಂಚು ಪಡದು ೩೯ ಅಂಕಗಳಿAದ ತೃತೀಯ ಸ್ಥಾನ, ಓಡಿಸ್ಸಾ ೩ ಚಿನ್ನ, ೩ ಬೆಳ್ಳಿ ೬ಕಂಚು ಪಡೆದು ೩೦ಅಂಕಗಳಿಂದ ೪ನೇ ಸ್ಥಾನ, ತೆಲಂಗಾಣ ೨ ಚಿನ್ನ, ೨ ಬೆಳ್ಳಿ ೯ ಕಂಚು ಪಡದು ೨೫ ಅಂಕಗಳಿಂದ ೫ನೇಸ್ಥಾನ, ಆಂದ್ರ ಪದೇಶ ೧ ಬೆಳ್ಳಿ, ೩ಅಂಗಳಿAದ ೬ನೇ ಸ್ಥಾನ ಪಡೆಯಿತು.
ನಾಲ್ಕು ದಿನಗಳಿಂದ ಯಶಸ್ವಿಯಾಗಿ ನಡೆದ ವುಶು ಕೀಡಾಕೂಟ ಗುರುವಾರ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಸಮಗ್ರವೀರಾಗ್ರಣಿ ಹಾಗೂ ಪ್ರಥಮ,ದ್ವೀತಯ ಸ್ಥಾನಗಳ ಟ್ರೋಪಿ, ಪ್ರಶಸ್ತಿ ಪಲಕ, ನೀಡಿ ಗೌರವಿಸಲಾಯಿತು.