

ಕಲಬುರಗಿ: ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಅಂಕ ಪಡೆಯುವುದು ಸವಾಲಿನ ಕೆಲಸ. ಆದರೆ ನಮ್ಮ ಶಾಲೆ ವಿದ್ಯಾರ್ಥಿ ೬೦೩ಕ್ಕೂ ಹೆಚ್ಚು ಅಂಕ ಪಡೆದಿದ್ದು, ಸಾಧಕರಿಗೆ ಸನ್ಮಾನದಿಂದ ಇತರರಿಗೆ ಪ್ರೇರಣೆ ದೊರೆಯಲಿದೆ ಎಂದು ಅಪ್ಪಾಜಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆ ಭಾಗಮ್ಮ ಬಿರಾದಾರ ಹೇಳಿದರು.
ಉದನೂರ ರಸ್ತೆಯಲ್ಲಿನ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಿಂದ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯದರ್ಶಿ ರಾಜಕುಮಾರ ಉದನೂರು ಮಾತನಾಡಿ, ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುವುದು. ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಬಡ ಮತ್ತು ಗ್ರಾಮೀಣ ಪ್ರದೇಶದ ರೈತ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿ ಅಗತ್ಯ ಎಂದರು. ಭಾಗ್ಯಶ್ರೀ, ಲತಾ, ಶಾಂತಾ ಇತರರಿದ್ದರು. ಗುರು ಸಾಲಿಮಠ ನಿರೂಪಣೆ ಮಾಡಿದರು. ಅಭಿಲಾಷಾ ವಂದಿಸಿದರು.