

ಬಾಗಲಕೋಟೆ: ಸಮಾಜದ ಬಹುಮುಖ್ಯವಾಗಿರುವ ಸಮೂಹ ಮಾಧ್ಯಮದಲ್ಲಿರುವ ಸೇವೆ ಸಲ್ಲಿಸುವ ಪತ್ರಕರ್ತರು ಸುದ್ದಿಯ ಬರೆಯುವ ಮುನ್ನ ಸತ್ಯಾಸತ್ಯೆತೆಯನ್ನು ಅರಿಯುವದು ಮಹಳಷ್ಟು ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ಬಾದಾಮಿ ತಾಲೂಕಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿ£ ಭಾನುವಾರ ಹಮ್ಮಿಕೊಂಡಿರುವ ಸಮೂಹ ಮಾಧ್ಯಮ:ಸಮಸ್ಯೆ-ಪರಿಹಾರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಧ್ಯಮವು ಮನ-ಮನೆಗಳಿಗೆ ಸುದ್ದಿ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಮಾಧ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತರು ತಾವು ಮಾಡುವ ಸುದ್ದಿಯ ಬಗ್ಗೆ ಮೊದಲು ಸತ್ಯಾಸತ್ಯತೆಯನ್ನು ಅರಿಯಬೇಕು. ಸುಳ್ಳು ಸುದ್ದಿ ಮಾಡುವುದರಿಂದ ಸಮಾಜದ ಹಾಗೂ ವ್ಯಕ್ತಿಯ ಮೇಲೆ ಆಗುವ ದುಷ್ಪರಿಣಾಮವಾಗುತ್ತದೆ. ಮಾಧ್ಯಮವು ಇಂದು ದೊಡ್ಡ ದೊಡ್ಡ ಕಂಪನಿಗಳ ಸ್ವತ್ತಾಗಿವೆ. ಅವರ ಕೈಬೊಂಬೆಯ ರೀತಿಯಲ್ಲಿ ಸುದ್ದಿಯ ಬರೆಯುವ ವ್ಯವಸ್ಥೆ ಇಂದು ಹುಟ್ಟಿಕೊಂಡಿದೆ ಹೀಗಾಗಿಯೇ ಪತ್ರಕರ್ತರ ಮೇಲಿನ ಗೌರವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದರು.
ನಾನು ಮೊದಲ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ನನ್ನ ಬೆಂಬಲ ಕೆ.ಎಚ್.ರಂಗನಾಥ ಅವರಿಗಿದೆ ಎಂದು ಸುಳ್ಳು ಸುದ್ದಿ ಬರೆದಿದ್ದರು ಇದರ ಪರಿಣಾಮದಿಂದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ನನ್ನನ್ನು ಅವರ ಅವಽ ಮುಗಿಯುವ ವರೆಗೂ ನೋಡಲೇ ಇಲ್ಲ. ಮುಂದೆ ಎದುರಾದ ಚುನಾವಣೆಯಲ್ಲಿ ನಾನು ಸೋತೆ ಎಂದು ಹೇಳಿದರು.
ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಭಂಜನ ಅವರು, ಸಾಹಿತ್ಯ-ಮಾಧ್ಯಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನರು ಯಾವ ಸುದ್ದಿಯನ್ನು ಇಷ್ಟ ಪಡುತ್ತಾರೆ ಅದೇ ಸುದ್ದಿಗಳನ್ನು ತೋರಿಸುವ ವ್ಯವಸ್ಥೆ ಮಾಧ್ಯಮದಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಪ್ರಕಾಶ ಬಾಳಕ್ಕನವರ ಅವರು, ಸಮಾಜದಲ್ಲಿ ಪರಿವರ್ತನೆ ಮಾಡುವ ಜವಾಬ್ದಾರಿ ಹೊಂದಿರುವ ಮಾಧ್ಯಮ ಇಂದು ಕವಲು ದಾರಿಯಲ್ಲಿದೆ. ಯುವ ಪತ್ರಕರ್ತರು ಸ್ಪಷ್ಟವಾಗಿ ಬರೆಯುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ.ಸಿ.ಎಂ.ಜೋಶಿ ಅವರು, ಪತ್ರಕರ್ತರು ಎಲ್ಲಾ ಕ್ಷೇತ್ರಗಳ ಬಗ್ಗೆ ಜ್ಞಾನ ಹೊಂದಿರಬೇಕು. ಎಲ್ಲರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಳ್ಳಬೇಕು. ಸಮೂಹ ಮಾಧ್ಯಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.
ಸಾರಥ್ಯ ವಹಿಸಿದ್ದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಕಾನಿಪ ರಾಜ್ಯ ಸಮಿತಿ ಸದಸ್ಯ ಮಹೇಶ ಅಂಗಡಿ, ಹಿರಿಯ ಪತ್ರಕರ್ತ ಈಶ್ವರ ಶೆಟ್ಟರ ವೇದಿಕೆಯಲ್ಲಿದ್ದರು. ಮಾಧ್ಯಮ ಕಾರ್ಯದರ್ಶಿ ಪ್ರಕಾಶ ಗುಳೇದಗುಡ್ಡ ನಿರೂಪಿಸಿದರು. ಮ.ಕೃ.ಮೇಗಾಡೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.