ಸತ್ತವರ ಹೆಸರಿನಲ್ಲಿ ಮತದಾನ ಆರೋಪ

Voting
Published on

ಬೈಲಹೊಂಗಲ: ನಗರದ ಬೈಲಹೊಂಗಲ ತಾಲೂಕು ಹುಟ್ಟುವಳಿ ಸಹಕಾರಿ ಮಾರಾಟ ಸಂಘಕ್ಕೆ (ಟಿಎಪಿಸಿಎಂಎಸ್) ಭಾನುವಾರ ನಡೆದ ಚುನಾವಣೆಯಲ್ಲಿ ಖೊಟ್ಟಿ ಮತ ಚಲಾವಣೆಯಾಗಿದ್ದು, ಸಮರ್ಪಕ ತನಿಖೆ ನಡೆಸಬೇಕೆಂದು ಅಭ್ಯರ್ಥಿ ಜಗದೀಶ ಕೊತ್ತಂಬ್ರಿ, ಬಸೀರಹ್ಮದ್ ಪಾಟೀಲ, ವಿಜಯಕುಮಾರ ಪಾಟೀಲ ಒತ್ತಾಯಿಸಿದರು.

ಚುನಾವಣಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿ, ಲಿತಾಂಶ ತಡೆ ಹಿಡಿದು ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಗುರುತಿನ ಚೀಟಿಯಲ್ಲಿ ಹೊಳಿನಾಗಲಾಪುರದವರಾದ ಮುರುೇಶ ಶೀಲವಂತರ ಹಾಗೂ ನೇಮಣ್ಣ ಆಲಬನ್ನವರ ಬದಲಿಗೆ ಬೇರೆ ವ್ಯಕ್ತಿಯ ೆಟೋ ಅಂಟಿಸಲಾಗಿದೆ.

ಬೇರೆ ವ್ಯಕ್ತಿ ಮತದಾನ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ನಿಧನರಾದ ಮಹಾಂತೇಶ ಅಂಗಡಿ, ವೀರಭದ್ರಪ್ಪ ಛಬ್ಬಿ, ಭೀಮಪ್ಪ ನೊರಜಪ್ಪನವರ ಹೆಸರಿನಲ್ಲಿ ಬೇರೊಬ್ಬರು ಮತ ಚಲಾಯಿಸಿದ್ದಾರೆ. ಖೊಟ್ಟಿ ಮತದಾರರು ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಚುನಾವಣೆ ಲಿತಾಂಶವು ಅಕ್ರಮವಾಗಿರುವುದರಿಂದ ಮರಳಿ ಚುನಾವಣೆ ನಡೆಸಬೇಕು ಮತ್ತು ಅಕ್ರಮವಾಗಿ ಚುನಾವಣೆ ಗೆದ್ದವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಿಬೇಕೆಂದು ಆಗ್ರಹಿಸಿದ್ದಾರೆ.

ಮರಣ ಹೊಂದಿದವರ ಪರವಾಗಿ ಮತದಾನ ಮಾಡಿದ್ದು, ಗುರುತಿನ ಚೀಟಿಯಲ್ಲಿ ಇನ್ನೊಬ್ಬ ವ್ಯಕ್ತಿಯ ೆಟೋ ಅಂಟಿಸಿದ್ದು ಅಪರಾಧ. ಈ ಪ್ರಕ್ರಿಯೆಯಲ್ಲಿ ಶಾಮೀಲಾದ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು. ಸದ್ಯಕ್ಕೆ ಚುನಾವಣೆ ಲಿತಾಂಶ ತಡೆಹಿಡಿಯಬೇಕು. ತನಿಖೆ ನಡೆಸಿ ಮರು ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.

| ಡಾ.ವಿಶ್ವನಾಥ ಪಾಟೀಲ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net