ಸಚಿವರ ರಾಜೀನಾಮೆ ಸಿಎಂ ಪರಮಾಧಿಕಾರ

priyankh
Published on

ಕಲಬುರಗಿ: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ. ಪ್ರಾಥಮಿಕ ವರದಿ ಬರಲಿ. ಅಗತ್ಯ ಬಿದ್ದರೆ ಸಿಬಿಐಗೂ ಕೊಡೋಣ. ಪ್ರತಿಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ ನೀಡಬೇಕಾ? ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸಿಎಂ ಪರಮಾಧಿಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿz್ದÁರೆ.
ಶಾಸಕ ಬಸನಗೌಡ ಯತ್ನಾಳ್ ಮಾತನಾಡಿದ್ದನ್ನು ಗಮನಿಸಿz್ದೆÃನೆ. ಅವರ ಪP್ಷÀ ಅಧಿಕಾರದಲ್ಲಿz್ದÁಗ ಪಿಎಸ್‌ಐ ಅಕ್ರಮ ನಡೆದಿತ್ತಲ್ಲ. ಆಗ ಯಾಕೆ ಮಾತನಾಡಲಿಲ್ಲ? ಯಾಕೆ ದಾಖಲೆ ಒದಗಿಸಲಿಲ್ಲ? ಈಗ ಇದ್ದಕ್ಕಿದ್ದಂತೆ ಪರಿಶಿಷ್ಟ ಪಂಗಡದವರ ಮೇಲೆ ಯಾಕೆ ಪ್ರೀತಿ ಹೆಚ್ಚಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೆಆರ್‌ಐಡಿಎಲï ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರ ಡೆತ್ ನೋಟ್‌ನಲ್ಲಿ ಕೆಲ ವೈಯಕ್ತಿಕ ವಿಚಾರ ಪ್ರಸ್ತಾಪಿಸಿz್ದÁರೆ ಎನ್ನಲಾಗುತ್ತಿದೆ. ತನಿಖೆಗೆ ಮೂವರು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.
ಸAವಿಧಾನದ ೩೭೧(ಜೆ) ವಿಧಿಗೆ ಸಂಬAಧಿಸಿದAತೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆದ ಕೆಲ ಗೊಂದಲಗಳನ್ನು ಸರಿಪಡಿಸಿz್ದÉÃವೆ. ಕಲ್ಯಾಣ ಕರ್ನಾಟಕಕ್ಕೆ ಆದ ಅನ್ಯಾಯ ಹಾಗೂ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಉz್ದÉÃಶದಿಂದ ಸಂವಿಧಾನಕ್ಕೆ ತಿದ್ದುಪಡಿ ತಂದು ೩೭೧(ಜೆ) ಜಾರಿಗೊಳಿಸಲಾಗಿದೆ. ಇದನ್ನು ವಿರೋಧಿಸುವವರು ನಮ್ಮ ಭಾಗದ ಅಭಿವೃದ್ಧಿಯನ್ನು ರಾಜ್ಯದ ಇತರ ಭಾಗದೊಂದಿಗೆ ಹೋಲಿಸಿ ನೋಡಲಿ. ಈ ಬಗ್ಗೆ ನಾನು ಈಗಾಗಲೆ ಕಾನೂನು ಸಚಿವರೊಂದಿಗೆ ಚರ್ಚಿಸಿz್ದÉÃನೆ ಎಂದು ತಿಳಿಸಿದರು.
ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ಉತ್ತರ ನೀಡಲಿ. ಭವಾನಿ ರೇವಣ್ಣ ಮಿಸ್ಸಿಂಗ್. ಕಾನೂನು ಚೌಕಟ್ಟಿನಲ್ಲಿ ಏನು ನಡೆಯುತ್ತದೆ ನಡೆಯಲಿ. ಇಂಥ ಸಂದರ್ಭದಲ್ಲಿ ನಾವು ಹೇಳುವುದೇನಿದೆ ಎಂದರು.
ಮೇಲ್ಮನೆ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್, ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಮಜರ್ ಅಲಂ ಖಾನ್, ಡಾ.ಕಿರಣ ದೇಶಮುಖ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net