ಸಕಲ ಕರ್ಮಗಳ ಒಡೆಯನೇ ವಿಶ್ವಕರ್ಮ

bkt-17-1
ಬಾಗಲಕೋಟೆ ನಗರದ ಶಿವಾನಂದ ಜೀನ್ ನಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ವಿಶ್ವಕರ್ಮಪ್ರಭುವಿನ ಪೂಜಾ ಮಹೋತ್ಸವ ಹಾಗೂ ಜಯಂತಿ ಕಾರ್ಯಕ್ರಮ ಜರುಗಿತು.
Published on

ಬಾಗಲಕೋಟೆ: ಜ್ಞಾನಮಾರ್ಗದಿಂದ ಕೂಡಿದ ವಿಶ್ವಕರ್ಮರು ಮಾನವನ ಶ್ರೇಯೋಭಿವೃದ್ದಿಗಾಗಿ ಶ್ರೇಷ್ಠವಾದ ಜೀವನ ಮಾರ್ಗವನ್ನು ತೋರಿಸಿಕೊಟ್ಟವರು, ಅಂಥವರ ಮೂಲ ಪುರುಷನೇ ವಿಶ್ವಕರ್ಮಪರಮಾತ್ಮನಾಗಿದ್ದಾನೆ, ಸೃಷ್ಟಿ ನಿರ್ಮಾಣ ಕತೃವಾಗಿದ್ದು ಸಕಲಕರ್ಮಗಳಿಗೂ ಅವನೇ ಒಡೆಯನಾಗಿದ್ದಾನೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜೀನ್ ನಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವದ ಸೃಷ್ಟಿಕರ್ತ ಶ್ರೀ ವಿಶ್ವಕರ್ಮಪ್ರಭುವಿನ ಪೂಜಾ ಮಹೋತ್ಸವ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜ್ಞಾನ ಮತ್ತು ವಿಜ್ಞಾನಗಳಿಂದ ಆವೃತವಾದ ವಿಶ್ವಕರ್ಮನು ಆತ್ಮ ಸಂಸ್ಕೃತಿಯ ಪ್ರತಿಕ. ವಿಶ್ವಕರ್ಮ ಪರಮಾತ್ಮನೆಂದರೆ ಅದೊಂದು ಲೋಕತತ್ವ, ಲೋಕದ ಜ್ಞಾನ ಮತ್ತು ಕರ್ಮಮಾರ್ಗಗಳನ್ನು ಮಾಡುತ್ತಾ ತಮ್ಮ ಕೆಲಸಗಳ ಮೂಲಕವೇ ತಮ್ಮ ಬದುಕಿನ ಕ್ರಮಗಳನ್ನು ರೂಪಿಸಿಕೊಳ್ಳಲು ಪೇರಕವಾದ ಜೀವಪರತತ್ವ, ಸಕಲವನ್ನು ಸಕಲರನ್ನು ಒಳಗೊಳ್ಳುವ ಮತ್ತು ಅವೆಲ್ಲವೂ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇಕಾದಂತ ಜೀವ ಚೈತನ್ಯ ನೀಡುವ ವೈಜ್ಞಾನಿಕ ವಿಧಾನವೇ ವಿಶ್ವಕರ್ಮ ತತ್ವವಾಗಿದೆ. ಜ್ಞಾನಮಾರ್ಗದಿಂದ ಕೂಡಿದ ವಿಶ್ವಕರ್ಮರು ಮಾನವನ ಶ್ರೇಯೋಭಿವೃದ್ಧಿಗಾಗಿ ಶ್ರೇಷ್ಠವಾದ ಜೀವನ ಮಾರ್ಗ ತೋರಿಸಿಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸವಿತಾ ಲೆಂಕನ್ನವರ, ಉಪಾಧ್ಯಕ್ಷ ಶೋಭಾ ರಾವ, ಮುಖಂಡರಾದ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂದೆ, ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಮೌನೇಶ ಪತ್ತಾರ, ರಾಜು ನಾಯ್ಕರ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಬಸವರಾಜ ಹುನಗುಂದ, ಶ್ರೀಕಾಂತ ಪತ್ತಾರ,ನಾಗೇಶ ಬರಗಿ, ಸಂಗಣ್ಣ ಹಡಗಲಿ, ಉಮೇಶ ಹಂಚಿನಾಳ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net