

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಡಾ.ದಾಕ್ಷಾಯಿಣಿ ಅವ್ವ ಅವರ ಕೊಡುಗೆ ಅಪಾರವಾಗಿವೆ. ಹೊಸ ಕೋರ್ಸ್ಗಳು, ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಹಾಗೂ ಸಾಕಷ್ಟು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತೋಶ್ರಿ ಸದಾ ಬೆಂಬಲ ನೀಡುತ್ತಾರೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಅಂಡ್ ಕಮ್ಯುನಿಕೇಶನ್ ಸಿಸ್ಟಮ್ಸ್ ಕುರಿತು ಅಂತಾರಾಷ್ಟಿçÃಯ ವಿಚಾರ ಸಂಕಿರಣ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವ ಅವರ ೫೫ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿ, ನವೆಂಬರ್ ಸಂಸ್ಥಾನ ಮತ್ತು ಸಂಘಕ್ಕೆ ಪ್ರಮುಖ ತಿಂಗಳಾಗಿದೆ. ನ.೧ರಂದು ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ನ.೧೪ರಂದು ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ನ.೨೨ರಂದು ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವ ಅವರ ಜನ್ಮದಿನ ಹಾಗೂ ನ.೩೦ರಂದು ಡಾ.ಅಪ್ಪ ಹಾಗೂ ಡಾ. ಅವ್ವ ಅವರ ವಿವಾಹ ವಾರ್ಷಿಕೋತ್ಸವವಿದೆ ಎಂದರು.
ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಡೊಳ್ಳೇಗೌಡರ್ ಸಮ್ಮೇಳನವನ್ನುz್ದೆÃಶಿಸಿ ಮಾತನಾಡಿದರು. ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಭವಾನಿ ಎಸ್. ಅಪ್ಪ, ಶಿವಾನಿ ಎಸ್. ಅಪ್ಪ, ಮಹೇಶ್ವರಿ ಎಸ್. ಅಪ್ಪ, ಪ್ರಮುಖರಾದ ಡಾ.ಅಲ್ಲಮಪ್ರಭು ದೇಶಮುಖ, ಡಾ.ಎಸ್.ಎಚ್.ಹೊನ್ನಳ್ಳಿ ಇತರರಿದ್ದರು. ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಕಿರಣ ಮಾಕಾ ಸ್ವಾಗತಿಸಿದರು.